ಗೌಪ್ಯತಾ ನೀತಿ :-

www.globalglaze.com (“ವೆಬ್ಸೈಟ್”) ಅಥವಾ ಇತರ ಯಾವುದೇ ರೂಪದಲ್ಲಿ ವೆಬ್ಸೈಟ್ ಮೂಲಕ ನೀವು ಗ್ಲೇಜ್ ಟ್ರೇಡಿಂಗ್ ಇಂಡಿಯಾ ಪ್ರೈ. ಲಿ. (“ಗ್ಲೇಜ್”) ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು. ಆದರೆ ಈ ಕಂಪನಿಯಿಂದ ರಚಿಸಲ್ಪಟ್ಟ ನಿಯತಾಂಕಗಳಿಗೆ ಸಂಬಂಧಿಸಿದಂತೆ ನೀವು ಅರಿತುಕೊಂಡಿರಬೇಕು ಎನ್ನುವುದೇ ಈ ಗೌಪ್ಯತಾ ನೀತಿಯ ಗುರಿಯಾಗಿದೆ. ನೀವು ನಮ್ಮ ವೆಬ್ಸೈಟ್ ಅನ್ನು ಬಳಸುವಾಗ ಅದರಲ್ಲಿ ನೀವು ನಮೂದಿಸುವ ಖಾಸಗಿ ಮಾಹಿತಿಯನ್ನು ನಾವು ರಕ್ಷಿಸುತ್ತೇವೆ ಮತ್ತು ಅದನ್ನು ಭದ್ರವಾಗಿ ಇರಿಸುತ್ತೇವೆ ಎನ್ನುವ ಪ್ರತಿಜ್ಞೆಯನ್ನು ನಿಮಗೆ ನೀಡುತ್ತಿದ್ದೇವೆ. ನಮ್ಮ ಉತ್ಪನ್ನಗಳನ್ನು ಸೇವೆಗಳನ್ನು ನೀವು ಬಳಸಿದಾಗ ನಾವು ಯಾವ ಮಾಹಿತಿಯನ್ನು ಸಂಗ್ರಹಿಸಿದ್ದೇವೆ, ಏತಕ್ಕಾಗಿ ನಾವು ಅದನ್ನು ಸಂಗ್ರಹಿಸಿದ್ದೇವೆ ಹಾಗೂ ನಿಮ್ಮೊಂದಿಗೆ ಸಂಪರ್ಕದಲ್ಲಿರಲು ಹೇಗೆ ನಾವು ಅದನ್ನು ಬಳಸುತ್ತೇವೆ ಎನ್ನುವುದನ್ನು ನೀವು ತಿಳಿದುಕೊಳ್ಳಲು ಈ ಹೇಳಿಕೆಯು ವಿವರಿಸುತ್ತದೆ.
ಕಾಲ ಕಾಲಕ್ಕೆ ಗೌಪ್ಯತಾ ನೀತಿಯನ್ನು ತಿದ್ದುಪಡಿ ಮಾಡುವ ಹಕ್ಕನ್ನು ಗ್ಲೇಜ್ ಕಾಯ್ದಿರಿಸಿದೆ.
ಈ ಗೌಪ್ಯತಾ ಹೇಳಿಕೆಯಲ್ಲಿ (“ಹೇಳಿಕೆ”), ಯಾವುದೇ ನಿಯಮಗಳು:-
ಗ್ಲೇಜ್ ಟ್ರೇಡಿಂಗ್ ಇಂಡಿಯಾ ಪ್ರೈ. ಲಿ. (“ಗ್ಲೇಜ್”) ಗೆ “ನಾವು”, “ನಮ್ಮ” ಮತ್ತು “ನಮಗೆ” ಎನ್ನುವ ಪದಗಳು ಉಲ್ಲೇಖಿಸುತ್ತವೆ ಮತ್ತು ಇತರ ಘಟಕಗಳು ಗ್ಲೇಜ್ನ ಒಡೆತನದಲ್ಲಿವೆ ಎಂಬುದನ್ನು ಸೂಚಿಸುತ್ತವೆ.
ಗ್ಲೇಜ್ನ ವಿತರಕರಿಗೆ, ಗ್ರಾಹಕರಿಗೆ, ಭೇಟಿ ನೀಡುವವರಿಗೆ, ಬಳಕೆದಾರರಿಗೆ ಮತ್ತು ಈ ವೆಬ್ಸೈಟ್ ಅನ್ನು ಬಳಸುವ ಇತರರಿಗೆ “ನೀವು’ ಮತ್ತು “ನಿಮ್ಮ” ಎಂಬ ಪದಗಳು ಉಲ್ಲೇಖಿಸುತ್ತವೆ.

1) ಮಾಹಿತಿ ಸಂಗ್ರಹಣೆ

ನೀವು ಸಂಪೂರ್ಣವಾದ, ಸತ್ಯವಾದ ಮತ್ತು ಪ್ರಸ್ತುತ ಮಾಹಿತಿಯನ್ನು ಒದಗಿಸಬಹುದು. ನೀವು ನಮಗೆ ಒದಗಿಸುವ ಎಲ್ಲಾ ಮಾಹಿತಿಯನ್ನು ಭದ್ರವಾಗಿ ಮತ್ತು ಯಾವುದೇ ಕಾರಣಕ್ಕೂ ಹಾನಿಗೊಳಗಾಗದ ಶೇಖರಣೆಯಲ್ಲಿ ಇರಿಸಲಾಗುತ್ತದೆ. ನಿಮ್ಮ ಅಪ್ಲೈನ್, ನಿಮ್ಮ ಅತಿಥಿ ಮತ್ತು ನಿಮಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಸಹ ನಾವು ಮಾಹಿತಿಯನ್ನು ಸಂಗ್ರಹಿಸಬಹುದು.
ಗ್ಲೇಜ್ ತನ್ನ ವೆಬ್ಸೈಟ್ನ ಮೂಲಕ ಅನೇಕ ಸ್ಥಳಗಳಲ್ಲಿ ನಿಮ್ಮ ಮಾಹಿತಿಯನ್ನು ಸಂಗ್ರಹಿಸಬಹುದು, ಅದು ಈ ಕೆಳಗಿನಂತಿದೆ:
ನೋಂದಣಿ; ಬ್ಯಾಂಕ್ ವಿವರಗಳ ಶೇಖರಣೆ; ಸಮೀಕ್ಷೆಗಳು ಮತ್ತು ಪ್ರಚಾರಗಳು

a) ನೋಂದಣಿ

ಗ್ಲೇಜ್ನ ಅಧಿಕೃತ ವಿತರಕನಾಗುವ ಉದ್ದೇಶಕ್ಕಾಗಿ ನೀವು ನಿಮ್ಮ ವೈಯಕ್ತಿಕ ಮಾಹಿತಿಗಳಾದ ಹೆಸರು, ವಯಸ್ಸು, ಜನ್ಮದಿನಾಂಕ, ವಿಳಾಸ, ಸಂಪರ್ಕಿಸುವ ವಿವರಗಳು, ಇಮೇಲ್ ವಿಳಾಸ್, ಲಿಂಗ ಮತ್ತು ಉದ್ಯೋಗ ಎಂಬ ಎಲ್ಲಾ ಮಾಹಿತಿಯನ್ನು ನಮಗೆ ನೀಡುವ ಅಗತ್ಯವಿದೆ.

b) ಬ್ಯಾಂಕ್ ವಿವರಗಳ ಸಂಗ್ರಹಣೆ

ನಿಮ್ಮ ಮತ್ತು ಗ್ಲೇಜ್ನ ನಡುವೆ ಪಾವತಿಗಳ ಪ್ರಕ್ರಿಯೆಯನ್ನು ನಡೆಸುವ ಉದ್ದೇಶಕ್ಕಾಗಿ ನಿಮ್ಮ ಬ್ಯಾಂಕಿನ ವಿವರಗಳನ್ನು ನಮಗೆ ಒದಗಿಸಬೇಕಾದ ಅಗತ್ಯವಿರುತ್ತದೆ. NEFT ಬ್ಯಾಂಕ್ ವರ್ಗಾವಣೆ ಮೂಲಕ ಅಥವ ಖಾತೆಯಲ್ಲಿ ಹಣ ಪಡೆಯುವ ಚೆಕ್ ಮೂಲಕ ನಿಮಗೆ ನಾವು ಪಾವತಿಯನ್ನು ಮಾಡುತ್ತೇವೆ. ಅಂತಹ ಮಾಹಿತಿಯನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ ಹಾಗೂ ನೀವು ಆ ರೀತಿಯಲ್ಲಿ ಆಯ್ಕೆ ಮಾಡದ ಹೊರತು, ನಾವು ಅಂತಹ ಮಾಹಿತಿಯನ್ನು ವೆಬ್ಸೈಟ್ನಲ್ಲಿ ತಡೆ ಹಿಡಿಯುವುದಿಲ್ಲ ಎಂದು ಈ ಮೂಲಕ ಭರವಸೆ ನೀಡುತ್ತೇವೆ.

c) ದೂರುಗಳು ಮತ್ತು ಫೀಡ್ಬ್ಯಾಕ್

ಗ್ಲೇಜ್ನ ಉತ್ಪನ್ನ ಮತ್ತು ಸರಕು ಸೇವೆಗಳ ಬಗ್ಗೆ ನಮ್ಮ ವೆಬ್ಸೈಟ್ ಮೂಲಕ ನೀವು ನಿಮ್ಮ ಫೀಡ್ಬ್ಯಾಕ್ ಅಥವಾ ಯಾವುದೇ ದೂರುಗಳನ್ನು ಯಾವುದೇ ಸಮಯದಲ್ಲೂ ನಮಗೆ ಒದಗಿಸಬಹುದು, ನಿಮ್ಮ ವೈಯಕ್ತಿಕ ಗುರುತಿಸಬಹುದಾದ ಮಾಹಿತಿಯನ್ನು ಪ್ರಸ್ತಾಪಿಸಲು ಮರೆಯಬೇಡಿ, ಇದರಿಂದ ನಾವು ಮತ್ತಷ್ಟು ಸುಧಾರಿತ ಉತ್ಪನ್ನ ಸೇವೆಗಳನ್ನು ನಿಮಗೆ ಒದಗಿಸಲು ಸಾಧ್ಯವಾಗುತ್ತದೆ.

2) ನಿಮ್ಮ ಮಾಹಿತಿಯ ಬಳಕೆ

a)    ನಿಮ್ಮ ಖಾತೆಗೆ ಲಾಗಿನ್ ಆಗಲು ನೀವು ಒಂದು ಪಾಸ್ವರ್ಡ್ ಅನ್ನು ನಮೂದಿಸುವ ಅಗತ್ಯವಿದೆ. ನಿಮ್ಮ ಟಾಸ್ಕನ್ನು ನಿರ್ವಹಿಸಲು ನಮ್ಮ ವೆಬ್ಸೈಟ್ಗೆ ನೀವು ಯಾವಾಗ ಬೇಕಾದರೂ ಲಾಗಿನ್ ಆಗಬಹುದು, ಆಗ ನಿಮ್ಮನ್ನು ದೃಢೀಕರಿಸುವುದಕ್ಕಾಗಿ ನೀವು ನೀಡಿದ ಮಾಹಿತಿಯನ್ನು ನಾವು ಬಳಸುತ್ತೇವೆ.

b)    ನಿಮ್ಮ ಮನವಿಗಳಿಗೆ ಪ್ರತಿಕ್ರಿಯಿಸಲು, ಸೇವೆಗಳನ್ನು ಒದಗಿಸುವುದಕ್ಕಾಗಿ ಮತ್ತು ಮೇಲ್ವಿಚಾರಣೆ ಮಾಡಲು ನಿಮ್ಮ ID ಖಾತೆಯನ್ನು ನಿರ್ವಹಿಸುವ ಉದ್ದೇಶಕ್ಕಾಗಿ ನಾವು ನಿಮ್ಮ ಮಾಹಿತಿಯನ್ನು ಬಳಸಬಹುದು.

3) ನಿಮ್ಮ ಮಾಹಿತಿಯನ್ನು ಮೂರನೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳುವುದು

a)    ಕಾನೂನು ಸೂಚಿಸದ ಹೊರತು ಅಥವಾ ಕಾನೂನಿಗೆ ಅಗತ್ಯವಿರದ ಹೊರತು ಮೂರನೇ ವ್ಯಕ್ತಿಯೊಂದಿಗೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಹಂಚಿಕೊಳ್ಳುವುದಿಲ್ಲ, ವಿತರಿಸುವುದಿಲ್ಲ, ಮಾರಾಟ ಮಾಡುವುದಿಲ್ಲ, ಟ್ರೇಡ್, ಬಾಡಿಗೆ ಅಥವಾ ಬೇರೆ ಯಾವುದೇ ರೀತಿ ತಿಳಿಸುವ ಮೂಲಕ ಮಾಹಿತಿಯನ್ನು ಬಹಿರಂಗ ಪಡಿಸುವುದಿಲ್ಲ ಎಂದು ಭರವಸೆ ನೀಡುತ್ತೇವೆ.

b)    ನಿಮ್ಮ ಅಪ್ಲೈನ್ ಜೊತೆಗೆ ಅಥವಾ ಯಾವುದೇ ಉನ್ನತ ಮಟ್ಟದ ವಿತರಕರೊಂದಿಗೆ ನಿಮ್ಮ ಮಾಹಿತಿಯನ್ನು ನಾವು ಹಂಚಬಹುದು ಏಕೆಂದರೆ ನಿಮಗೆ ಅಚ್ಚುಮೆಚ್ಚಿನ ಅನುಭವವನ್ನು ವಿತರಿಸಲು ಮತ್ತು ಸೂಕ್ತ ಮಾರ್ಗದರ್ಶನಕ್ಕಾಗಿ ನಾವು ಹಂಚುತ್ತೇವೆ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳದಂತೆ ಮತ್ತು ದುರುಪಯೋಗಪಡಿಸದಂತೆ ಇರಿಸುವಂತಹ ನಿಮ್ಮ ಅಪ್ಲೈನ್ ನಮ್ಮ ಕರ್ತವ್ಯವಾಗಿದೆ ಹಾಗೂ ನಿಮ್ಮ ಮಾಹಿತಿಯನ್ನು ಬಳಸುವಾಗ ಗೌಪ್ಯತಾ ನೀತಿಯ ನಿಯಮಗಳನ್ನು ಅನುಸರಿಸುತ್ತೇವೆಂದು ಭರವಸೆ ನೀಡುತ್ತೇವೆ.

c)    ನಿಮ್ಮ ಮಾಹಿತಿಯನ್ನು ಮೂರನೇ ವ್ಯಕ್ತಿಯೊಂದಿಗೆ ನಾವು ಹಂಚಬಹುದಾಗಿದೆ, ಏಕೆಂದರೆ ನಮ್ಮ ಉತ್ಪನ್ನಗಳ ಮತ್ತು ಸೇವೆಗಳ ಬಗ್ಗೆ ನಿಮಗೆ ನವೀಕರಣಗಳನ್ನು ಕಳುಹಿಸಲು, ನಿಮಗೆ ಪಾವತಿಗಳನ್ನು ಸಲ್ಲಿಸಲು ನಾವು ಮಾಹಿತಿಯನ್ನು ಹಂಚಬಹುದು.

d)    ನಿಮ್ಮ ಮಾಹಿತಿಯನ್ನು ಕರಾರಿನ ಅಡಿಯಲ್ಲಿ ಮತ್ತು ತಾಂತ್ರಿಕ ರಕ್ಷಣೆಗಳ ಅಡಿಯಲ್ಲಿ ಬಳಸಲಾಗುತ್ತಿದೆ ಎಂದು ನಾವು ಭರವಸೆ ನೀಡುವ ಮೂಲಕ ಮೂರನೇ ವ್ಯಕ್ತಿಗೆ ನಿಮ್ಮ ಮಾಹಿತಿಯನ್ನು ಒದಗಿಸುವಾಗ ಅನುಸರಿಸುತ್ತೇವೆ.

4) ವ್ಯಾಪಾರದ ವರ್ಗಾವಣೆಗಳು

ಯಾವುದೇ ಮತ್ತು ನಿಮ್ಮ ಎಲ್ಲಾ ಮಾಹಿತಿಯನ್ನು ವರ್ಗಾವಣೆ ಮಾಡುವಂತಹ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ, ಅಂದರೆ ಮೂರನೇ ವ್ಯಕ್ತಿಗೆ ನಿಮ್ಮಿಂದ ಸಂಗ್ರಹಿಸಲಾದ ಮಾಹಿತಿಯನ್ನು ಕೆಲವು ಮುಖ್ಯ ಸಂದರ್ಭಗಳಾದ, ಯಾವುದೇ ವಿಲೀನ, ಮಾರಾಟ, ಜಂಟಿ ಉದ್ಯಮ, ನಿಯೋಜನೆ, ವರ್ಗಾವಣೆ ಅಥವಾ ಗ್ಲೇಜ್ನ ಯಾವುದೇ ಭಾಗದ ಅಥವಾ ಎಲ್ಲಾ ಇತ್ಯರ್ಥಗಳಂತಹ ಸನ್ನಿವೇಶಗಳಲ್ಲಿ ನೀವು ನೀಡಿದ ಮಾಹಿತಿಯನ್ನು ನೀಡುವ ಹಕ್ಕನ್ನು ನಾವು ಹೊಂದಿದ್ದೇವೆ.

ನಿಮ್ಮ ಮಾಹಿತಿಯನ್ನು ನೀವು ಹಿಂಪಡೆಯಬಹುದು ಮತ್ತು ನವೀಕರಿಸಬಹುದು

ಮಾರ್ಕೇಟಿಂಗ್ ಉದ್ದೇಶಗಳಿಗಾಗಿ ನೀವು ನಮ್ಮ ವೆಬ್ಸೈಟ್ನಲ್ಲಿ ಸಲ್ಲಿಸಿದ ಮಾಹಿತಿಯನ್ನು ಯಾವಾಗ ಬೇಕಾದರೂ ನೀವು ಹಿಂಪಡೆಯಬಹುದು ಮತ್ತು ನವೀಕರಿಸಬಹುದು, ದಯವಿಟ್ಟು ನಮ್ಮನ್ನು ಸಂಪರ್ಕಿಸಿ, ಅದರಿಂದ ನಮ್ಮ ದಾಖಲೆಗಳಲ್ಲಿ ನಾವು ನಿಮ್ಮ ಮಾಹಿತಿಯನ್ನು ಪರಿಷ್ಕರಿಸಬಹುದು ಅತವಾ ನೀವೇ ವೆಬ್ಸೈಟ್ಗಳಿಗೆ ಆನ್ಲೈನ್ನಲ್ಲಿ ಹೋಗಿ ನಿಮ್ಮದೇ ಮಾಹಿತಿಯನ್ನು ನವೀಕರಿಸಬಹುದು.

5) ಕುಕೀಸ್

ವೆಬ್ ಬ್ರೌಸರ್ಗೆ ವೆಬ್ ಸರ್ವರ್ನಿಂದ ಕಳುಹಿಸಲಾದ ಒಂದು ಸಂದೇಶವೇ ಈ ಕುಕೀಸ್ ಆಗಿದೆ. ಬ್ರೌಸರ್ ಟೆಕ್ಸ್ಟ್ ಫೈಲ್ನಲ್ಲಿ ಸಂದೇಶವನ್ನು ಸಂಗ್ರಹಿಸುತ್ತದೆ. ಆನಂತರ ಸರ್ವರ್ನಿಂದ ಒಂದು ಪುಟವನ್ನು ಬ್ರೌಸರ್ ಪ್ರತೀ ಬಾರಿ ಕೋರಿಕೊಂಡಾಗಲೆಲ್ಲಾ ಅದು ಆ ಸಂದೇಶವನ್ನು ಮರಳಿ ಸರ್ವರ್ಗೆ ಕಳುಹಿಸುತ್ತದೆ.

ಕುಕೀಸ್ನ ಮುಖ್ಯ ಉದ್ದೇಶವೇನೆಂದರೆ ಬಳಕೆದಾರರನ್ನು ಗುರುತಿಸುವುದು ಮತ್ತು ಸಾಧ್ಯವಾದಲ್ಲಿ ಅವರಿಗಾಗಿ ಕಸ್ಟಮೈಸ್ ಮಾಡಲಾದ ವೆಬ್ ಪೇಜ್ಗಳನ್ನು ಸಿದ್ಧಗೊಳಿಸುವುದು. ಕುಕೀಸ್ ಅನ್ನು ಬಳಸಿಕೊಂಡು ನೀವು ವೆಬ್ಸೈಟ್ಗೆ ಪ್ರವೇಶಿಸಿದಾಗ, ನಿಮ್ಮ ಹೆಸರು ಮತ್ತು ಆಸಕ್ತಿಗಳಂತಹ ಮಾಹಿತಿಯನ್ನು ಒದಗಿಸಲು ಒಂದು ಅರ್ಜಿಯನ್ನು ಭರ್ತಿಮಾಡಬೇಕೆಂದು ನಿಮಗೆ ಕೇಳಬಹುದಾಗಿದೆ. ಒಂದು ಕುಕೀ ಒಳಗೆ ಈ ಮಾಹಿತಿಯನ್ನು ಪ್ಯಾಕೇಜ್ ಮಾಡಲಾಗುತ್ತದೆ ಮತ್ತು ಮುಂದಿನ ಬಳಕೆಗಾಗಿ ಸಂಗ್ರಹಿಸಿಡುವ ನಿಮ್ಮ ವೆಬ್ಬ್ರೌಸರ್ಗೆ ಕಳುಹಿಸಲಾಗುತ್ತದೆ. ಅದೇ ವೆಬ್ಸೈಟ್ಗೆ ನೀವು ಮುಂದಿನ ಬಾರಿ ಹೋದಾಗ ನಿಮ್ಮ ಬ್ರೌಸರ್ ಈ ಕುಕೀಯನ್ನು ವೆಬ್ಸರ್ವರ್ಗೆ ಕಳುಹಿಸುವುದು. ಕಸ್ಟಮ್ ವೆಬ್ ಪುಟಗಳ ಜೊತೆಗೆ ಈ ಮಾಹಿತಿಯನ್ನು ನಿಮಗೆ ಪ್ರಸ್ತುತಪಡಿಸುವುದಕ್ಕಾಗಿ ಸರ್ವರ್ ಅದನ್ನು ಬಳಸಬಹುದು. ಆದ್ದರಿಂದ, ಉದಾಹರಣೆಗೆ, ಕೇವಲ ಸಾರ್ವತ್ರಿಕವಾದ ಸ್ವಾಗತಪುಟವನ್ನು ನೋಡುವ ಬದಲಿಗೆ, ಅದರ ಮೇಲೆ ನಿಮ್ಮ ಹೆಸರೊಂದಿಗೆ ಆ ಸ್ವಾಗತಪುಟವನ್ನು ನೀವು ವೀಕ್ಷಿಸಬಹುದು.

ಮ್ಯಾಜಿಕ್ ಕುಕೀಸ್ ಎಂದು ಕರೆಯಲಾಗುವ UNIX ವಸ್ತುಗಳಿಂದ ಈ ಕುಕೀ ಹೆಸರನ್ನು ಪಡೆಯಲಾಗಿದೆ. ಒಬ್ಬ ಬಳಕೆದಾರನಿಗೆ ಅಥವಾ ಒಂದು ಪ್ರೋಗ್ರಾಂಗೆ ಜೋಡಣೆಗೊಂಡಿರುವ ಈ ಟೋಕನ್ಗಳು ಬಳಕೆದಾರನಿಂದ ಅಥವಾ ಪ್ರೋಗ್ರಾಂನಿಂದ ನಮೂದಿಸಲಾದ ಪ್ರದೇಶಗಳ ಆಧಾರದ ಮೇಲೆ ಈ ಟೋಕನ್ಗಳು ಬದಲಾವಣೆಗೊಳ್ಳುತ್ತವೆ.

ನಿಮ್ಮ ವೆಬ್ಬ್ರೌಸರ್ನ ಪ್ರಕಾರ (ಇಂಟರ್ನೆಟ್ ಎಕ್ಸ್ಪ್ಲೋರರ್, ಮೊಜಿಲ್ಲಾ ಫೈರ್ಫಾಕ್ಸ್ ವೆಬ್ ಬ್ರೌಸರ್, ಒಪೇರಾ ವೆಬ್ ಬ್ರೌಸರ್, ಗೂಗಲ್ ಕ್ರೋಮ್) ಕೇವಲ ಕಸ್ಟಮೈಜ್ಗೊಳಿಸುವ ಮುಖಾಂತರ, ನಿಮ್ಮ ಆದ್ಯತೆಗಳ ಆಧಾರದ ಮೇಲೆ ನಿಮ್ಮ ಕುಕೀ ಸೆಟ್ಟಿಂಗ್ಗಳನ್ನು ನೀವು ಬದಲಾಯಿಸಬಹುದು.

6) ಒಂದು ಕುಕೀ ಯಾವ ಮಾಹಿತಿಯನ್ನು ಸಂಗ್ರಹಿಸುತ್ತದೆ?

ಬ್ರೌಸರ್ನ ಬಗ್ಗೆ ಮಾಹಿತಿಯನ್ನು ಒಳಗೊಂಡ ಟೆಕ್ಸ್ಟ್ನ ಒಂದು ಸ್ಟ್ರಿಂಗ್ ಅನ್ನು ಕುಕೀಯು ಬಹು ಮಟ್ಟಿಗೆ ಹೊಂದುವುದು. ಕಾರ್ಯನಿರ್ವಹಿಸಲು ನೀವು ಯಾವ ಕಡೆಯಿಂದ ಬಂದಿರುವುದೆಂಬುದನ್ನು ತಿಳಿದುಕೊಳ್ಳುವ ಅಗತ್ಯ ಕುಕೀಗೆ ಇರುವುದಿಲ್ಲ; ನಿಮ್ಮ ಬ್ರೌಸರ್ ಅನ್ನು ನೆನಪಿಟ್ಟುಕೊಳ್ಳುವ ಅಗತ್ಯ ಮಾತ್ರ ಕುಕೀಗೆ ಇದೆ. ನಿಮ್ಮ ಬಗ್ಗೆ ಹೆಚ್ಚಿನ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲು ಕೆಲವು ವೆಬ್ಸೈಟ್ಗಳು ಕುಕೀಗಳನ್ನು ಬಳಸುತ್ತವೆ. ಆದಾಗ್ಯೂ, ಆ ವೈಯಕ್ತಿಕ ಮಾಹಿತಿಯನ್ನು ನೀವೆ ಸ್ವತಃ ವೆಬ್ಸೈಟ್ಗೆ ಒದಗಿಸಿದ್ದಲ್ಲಿ ಮಾತ್ರ ನಾವು ಅದನ್ನು ಮಾಡಬಹುದಾಗಿದೆ. ಕುಕೀಯಲ್ಲಿ ಸಂಗ್ರಹಣೆಗೊಂಡ ಮಾಹಿತಿಯನ್ನು ಕಾನೂನು ಬದ್ಧ ವೆಬ್ಸೈಟ್ಗಳು ಈ ವೈಯಕ್ತಿಕ ಮಾಹಿತಿಯನ್ನು ಎನ್ಕ್ರಿಪ್ಟ್ (ಗೂಢ ಲಿಪೀಕರಣ) ಮಾಡುವವು. ನಿಮ್ಮ ಕುಕೀ ಫೋಲ್ಡರ್ಗೆ ಬೇರೊಬ್ಬ ವ್ಯಕ್ತಿಯು ಪ್ರವೇಶಿಸಿ ಅನಧಿಕೃತವಾಗಿ ಬಳಸುವುದನ್ನು ತಡೆಯಲು ಈ ರೀತಿ ಗೂಢ ಲಿಪೀಕರಣ ಮಾಡಲಾಗುತ್ತದೆ.

ಕುಕೀಗಳು ತಮಗೆ ರವಾನಿಸಬಹುದಾದ ಆರು ನಿಯತಾಂಕಗಳನ್ನು ಹೊಂದಿದೆ:

  • ಕುಕೀಯ ಹೆಸರು.
  • ಕುಕೀಯ ಮೌಲ್ಯ.
  • ನಿಮ್ಮ ಬ್ರೌಸರ್ ನಲ್ಲಿ ಕುಕೀಯು ಎಷ್ಟು ದೀರ್ಘಕಾಲ ಸಕ್ರಿಯವಾಗಿ ಉಳಿಯಲಿದೆ ಎಂಬುದನ್ನು - ಕುಕೀಯ ಅಂತಿಮ ಕಾಲಾವಧಿಯು ನಿರ್ಧರಿಸುತ್ತದೆ.
  • ಇದು ಕುಕೀಯ ಮಾರ್ಗವು ಮಾನ್ಯವಾಗಿರುತ್ತದೆ – ಇದಕ್ಕಾಗಿ ಮಾನ್ಯವಾಗಿರುವ ಕುಕೀಯ ಮಾರ್ಗವು URL ಅನ್ನು ಹೊಂದಿಸುತ್ತದೆ. ಆ ಮಾರ್ಗದ ಹೊರಭಾಗದಲ್ಲಿನ ವೆಬ್ಪೇಜ್ಗಳು ಕುಕೀಯನ್ನು ಬಳಸಲು ಸಾಧ್ಯವಿಲ್ಲ.
  • ಕುಕೀಯ ಮಾರ್ಗವು ಇದಕ್ಕಾಗಿ ಮಾನ್ಯವಾಗಿದೆ. ಒಂದು ಡೊಮೇನ್ನಲ್ಲಿ ಆ ಸೈಟ್ ಬಹುವಿಧದ ಸರ್ವರ್ಗಳನ್ನು ಬಳಸಿದಾಗ, ಇದು ಯಾವುದೇ ಸರ್ವರ್ಗಳ ಮೇಲೆ ಪೇಜ್ಗಳಿಗೆ ಕುಕೀಯು ಪ್ರವೇಶಿಸುವುದನ್ನು ಸುಲಭಗೊಳಿಸುತ್ತದೆ.
  • ಒಂದು ಸುರಕ್ಷಿತ ಸಂಪರ್ಕಕ್ಕಾಗಿ ಇರುವ ಅಗತ್ಯ – SSL ಬಳಸುವ ಒಂದು ಸೈಟ್ ನಂತೆಯೇ, ಒಂದು ಸುರಕ್ಷಿತವಾದ ಸರ್ವರ್ನ ಸ್ಥಿತಿಯ ಅಡಿಯಲ್ಲಿ ಕುಕೀಯನ್ನು ಮಾತ್ರ ಬಳಸಬಹುದಾಗಿದೆ ಎಂಬುದನ್ನು ಇದು ಸೂಚಿಸುತ್ತದೆ.

7) ಕುಕೀಸ್ ಅನ್ನು ನಾನು ಹೇಗೆ ಸಕ್ರಿಯಗೊಳಿಸಬಲ್ಲೆ ಅಥವಾ ನಿಷ್ಕ್ರಿಯಗೊಳಿಸಬಲ್ಲೆ?

ಈ ವಿಭಾಗವು ಕುಕೀಗಳನ್ನು ಹೇಗೆ ಸಕ್ರಿಯಗೊಳಿಸುವುದು (ಕುಕೀಗಳನ್ನು ಆನ್ ಮಾಡುವುದು) ಮತ್ತು ನಿಷ್ಕ್ರಿಯಗೊಳಿಸುವುದು ಎಂಬುದನ್ನು ನಿಮಗೆ ತಿಳಿಸುವವು. ನಿಮ್ಮ ವೆಬ್ ಬ್ರೌಸರ್ ನಿಂದಲೇ ಕುಕೀಗಳನ್ನು ನಿಭಾಯಿಸಲಾಗುವುದರಿಂದ, ಅವುಗಳನ್ನು ಸಕ್ರಿಯಗೊಳಿಸುವ ಅಥವಾ ನಿಷ್ಕ್ರಿಯಗೊಳಿಸುವ ವಿಧಾನವು ನೀವು ಬಳಸುತ್ತಿರುವ ಬ್ರೌಸರ್ನ ಆಧಾರದ ಮೇಲೆ ಬದಲಾಗುತ್ತವೆ.

a) ಮೈಕ್ರೋಸಾಫ್ಟ್ ಇಂಟರ್ನೆಟ್ ಎಕ್ಸ್ಪ್ಲೋರರ್ 8.0 ಅಥವಾ 9.0 – ’ಟೂಲ್ಸ್ Ã ಇಂಟರ್ನೆಟ್ ಆಪ್ಷನ್ಸ್’ ನ ಮೆನು ಐಟಂ ಅನ್ನು ಆಯ್ಕೆಮಾಡಿ ನಂತರ ’ಪ್ರೈವೆಸಿ’ ಟ್ಯಾಬ್ ಅನ್ನು ತೆರೆಯಿರಿ – ಕುಕೀಯ ವಿವಿಧ ವಿಭಾಗಗಳನ್ನು ನೀವು ನಂತರದಲ್ಲಿ ನಿರ್ಬಂಧಿಸುವಂತೆ ಅಥವಾ ಅವಕಾಶ ನೀಡುವಂತೆ ಸ್ಲೈಡರ್ ಅನ್ನು ಸರಿಹೊಂದಿಸಬಹುದು. ಬ್ರೌಸರ್ನ ಬಿಹೇವಿಯರ್ನ ಮೇಲೆ ಉತ್ತಮವಾದ ನಿಯಂತ್ರಣವನ್ನು ನೀವು ಬಳಕೆ ಮಾಡಬಹುದು ಅದಕ್ಕೆ ಪರ್ಯಾಯವಾಗಿ ’ಅಡ್ವಾನ್ಸ್ಡ್’ ಅನ್ನು ಕ್ಲಿಕ್ ಮಾಡಿ, (ಫಸ್ಟ್ ಪಾರ್ಟಿ ಕುಕೀಸ್) ನೀವು ವೆಬ್ಸೈಟ್ನಲ್ಲಿ ಭೇಟಿ ನೀಡುವುದರ ಮೂಲಕ ಅಥವಾ ಹುಟ್ಟುಹಾಕುವುದರ ಮೂಲಕ ಕುಕೀಗಳಿಗೆ ಸ್ವೀಕರಿಸುವ ನಿರ್ಬಂಧಿಸುವ ಅಥವಾ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದನ್ನು ಆಯ್ಕೆಮಾಡಿಕೊಳ್ಳುವ ಅವಕಾಶವನ್ನು ನೀಡಬಹುದು, ನೀವು ಭೇಟಿ ನೀಡುತ್ತಿರುವ ಒಂದು ವೆಬ್ಸೈಟ್ಗಿಂತ ಬೇರೆ ವೆಬ್ಸೈಟ್ಗಳಿಂದ ಹುಟ್ಟುಹಾಕುವ ಮೂಲಕ ಕುಕೀಗಳಿಗೆ ಉತ್ತಮವಾದ ನಿಯಂತ್ರಣವನ್ನು ಒದಗಿಸಬಹುದು. (ಥರ್ಡ್ ಪಾರ್ಟಿ ಕುಕೀಸ್, ಒಬ್ಬ ಜಾಹೀರಾತುದಾರನ ವೆಬ್ಸೈಟ್ ಮೇಲೆ ಸಾಮಾನ್ಯವಾಗಿ ಆತಿಥ್ಯವಹಿಸಲಾದ ಬ್ಯಾನರ್ ಜಾಹೀರಾತುಗಳಿಂದ ಬಳಸಲಾಗುತ್ತದೆ.)

b) ಫೈರ್ಫಾಕ್ಸ್ 7.0 :- ’ಟೂಲ್ಸ್ ಅ ಆಪ್ಷನ್ಸ್’ ಮೆನು ಐಟಂ ಅನ್ನು ಉಪಯೋಗಿಸಿ (ಫೈರ್ಫಾಕ್ಸ್ ಬಟನ್ನಿನ ಅಡಿಯಲ್ಲಿ ಇರಬಹುದು), ನಂತರದಲ್ಲಿ ’ಪ್ರೈವೆಸಿ’ ಟ್ಯಾಬ್ ಅನ್ನು ಆಯ್ಕೆಮಾಡಿ. ’ಫೈರ್ ಫಾಕ್ಸ್ ವಿಲ್:’ ಆಯ್ಕೆಯನ್ನು ’ಯೂಸ್ ಕಸ್ಟಮ್ ಸೆಟ್ಟಿಂಗ್ಸ್ ಫಾರ್ ಹಿಸ್ಟರಿ’ ಗೆ ಸೆಟ್ ಮಾಡಿ. ಈಗ ಕುಕೀಗಳನ್ನು ನೀವು ಭೇಟಿ ನೀಡುವ ವೆಬ್ಸೈಟ್ಗಳಿಗೆ ಮತ್ತು ಥರ್ಡ್ ಪಾರ್ಟಿ ವೆಬ್ಸೈಟ್ಗಳಿಗೆ ಸಕ್ರಿಯಗೊಳಿಸಲಾಗಿದೆಯೇ ಇಲ್ಲವೇ ಎಂದು ನೀವು ಆಯ್ಕೆ ಮಾಡಬಹುದು ಹಾಗೂ ಆ ರೀತಿಯಾಗಿದ್ದಲ್ಲಿ, ಅವು ಎಷ್ಟು ದೀರ್ಘಕಾಲ ದೃಢವಾಗಿ ನಿಲ್ಲುವವು. ನಿರ್ದಿಷ್ಟ ವೆಬ್ಸೈಟ್ಗಳಿಗಾಗಿ ಸೆಟ್ಟಿಂಗ್ಗಳನ್ನು ಅತಿಕ್ರಮಿಸಲು ನೀವು ’ಎಕ್ಸೆಪ್ಷನ್ಸ್’ ಬಟನ್ ಅನ್ನು ಸಹ ಬಳಸಬಹುದು.

c) ಫೈರ್ಫಾಕ್ಸ್ 3.0 :- ’ಟೂಲ್ಸ್ ಅ ಆಪ್ಷನ್ಸ್’ ಮೆನು ಐಟಂ ಅನ್ನು ಉಪಯೋಗಿಸಿ, ಹಾಗೂ ನಂತರದಲ್ಲಿ ’ಪ್ರೈವೆಸಿ’ ಟ್ಯಾಬ್ ಅನ್ನು ಆಯ್ಕೆಮಾಡಿ. ಇಲ್ಲಿ ಕುಕೀಗಳನ್ನು ಸಕ್ರಿಯಗೊಳಿಸಲಾಗಿದೆಯೇ ಇಲ್ಲವೇ ಎಂದು ನೀವು ಆಯ್ಕೆ ಮಾಡಬಹುದು, ಹಾಗೂ ಆ ರೀತಿಯಾಗಿದ್ದಲ್ಲಿ, ಅವು ಎಷ್ಟು ದೀರ್ಘಕಾಲ ದೃಢವಾಗಿ ನಿಲ್ಲುವವು. ನಿರ್ದಿಷ್ಟ ವೆಬ್ಸೈಟ್ಗಳಿಗಾಗಿ ಸೆಟ್ಟಿಂಗ್ಗಳನ್ನು ಅತಿಕ್ರಮಿಸಲು ನೀವು ’ಎಕ್ಸೆಪ್ಷನ್ಸ್’ ಬಟನ್ ಅನ್ನು ಸಹ ಬಳಸಬಹುದು.

d) ಗೂಗಲ್ ಕ್ರೋಮ್ 5.0 :- ’ಕಸ್ಟಮೈಜ್ ಆಂಡ್ ಕಂಟ್ರೋಲ್’ ಮೆನುವಿನ ಮೇಲೆ ’ಆಪ್ಷನ್ಸ್’ ಅನ್ನು ಆಯ್ಕೆ ಮಾಡಿ, ನಂತರದಲ್ಲಿ ’ಅಂಡರ್ ದ ಬಾನೆಟ್’ ಟ್ಯಾಬನ್ನು ತೆರೆಯಿರಿ. ’ಪ್ರೈವೆಸಿ’ ವಿಭಾಗದಲ್ಲಿ, ’ಕಂಟೆಂಟ್ ಸೆಟ್ಟಿಂಗ್ಸ್’ ಬಟನನ್ನು ಒತ್ತಿರಿ, ’ಕುಕೀಸ್ ಟ್ಯಾಬ್ ಅನ್ನು ತೆರೆಯಿರಿ. ಅಗತ್ಯವಿರುವ ಕುಕೀ ಬಿಹೇವಿಯರ್ ಅನ್ನು ಹೊಂದಿಸಿ ಮತ್ತು ನಿರ್ದಿಷ್ಟ ವೆಬ್ಸೈಟ್ಗಳನ್ನು ಸಂರಚಿಸಲು ’ಎಕ್ಸೆಪ್ಷನ್ಸ್’ ಬಟನ್ ಅನ್ನು ಬಳಸಿ (ಅಗತ್ಯವಿದ್ದಲ್ಲಿ).

e़) ಆಪಲ್ ಸಫಾರಿ 5.0 :- ’ಸೆಟ್ಟಿಂಗ್ಸ್’ ಮೆನುವಿನ ಮೇಲಿರುವ ’ಪ್ರಿಫರೆನ್ಸಸ್’ ಅನ್ನು ಆಯ್ಕೆ ಮಾಡಿ, ನಂತರ ’ಸೆಕ್ಯೂರಿಟಿ’ ಟ್ಯಾಬನ್ನು ತೆರೆಯಿರಿ. ಈಗ ಅಗತ್ಯವಿರುವ ಕುಕೀಯ ಬಿಹೇವಿಯರ್ ಅನ್ನು ಹೊಂದಿಸಿ.

ಗಮನಿಸಿ: ನಿಷ್ಕ್ರೀಯಗೊಳ್ಳುವ ಕುಕೀಗಳು ಸರಿಯಾಗಿ ಕೆಲಸ ಮಾಡುವಂತಹ ಕೆಲವು ವೆಬ್ಸೈಟ್ಗಳನ್ನು ತಡೆಯುತ್ತವೆ, ಬಹುಶಃ ಅದರ ಅರ್ಥವೇನೆಂದರೆ ಮಾಹಿತಿಯನ್ನು ನೀವು ಮರು ನಮೂದಿಸಲು ಪ್ರಾಮಾಣೀಕರಾಗಿದ್ದೀರಿ, ಅದು ಸಾಮಾನ್ಯವಾಗಿ ಒಂದು ಕುಕೀಯಲ್ಲಿ ಈಗಾಗಲೇ ಸಂಗ್ರಹಗೊಂಡಿದ್ದಿರಬಹುದು.

8) ತಿದ್ದುಪಡಿಗಳು

ಈ ನೀತಿಯಲ್ಲಿ ವಿವರಿಸಲಾದ ಯಾವುದೇ ಅಂಶವನ್ನು ಒಂದು ಲಿಖಿತ ಸೂಚನೆಯ ಮೂಲಕ, www.globalglaze.com ವೆಬ್ಸೈಟ್ನಲ್ಲಿ ನೀವು ತಿದ್ದುಪಡಿ ಮಾಡುವ, ಮಾರ್ಪಡಿಸುವ, ಅಥವಾ ಪರಿಷ್ಕರಿಸುವ ಹಕ್ಕನ್ನು ಗ್ಲೇಜ್ ಕಾಯ್ದಿರಿಸಿದೆ. ಒಂದುವೇಳೆ ಅಂತಹ ತಿದ್ದುಪಡಿಗಳನ್ನು ನೀವು ಒಪ್ಪದಿದ್ದಲ್ಲಿ, ಆ ನೋಟಿಫಿಕೇಷನ್ (ಅಧಿಸೂಚನೆ) ಹೊರಬಂದ 30 ದಿನಗಳ ಒಳಗಾಗಿ ನೀವು ನಮ್ಮನ್ನು ಸಂಪರ್ಕಿಸಬಹುದು. ಎಲ್ಲಾ ತಿದ್ದುಪಡಿಗಳಿಗೆ ಸ್ವೀಕೃತವಾಗಿದೆ ಎಂಬ ಅರ್ಥದಲ್ಲಿ ಗ್ಲೇಜ್ ನೊಂದಿಗೆ ಮುಂದುವರೆದ ನಿಮ್ಮ ಸಂಬಂಧವನ್ನು ಪರಿಗಣಿಸಲಾಗುತ್ತದೆ.

9) ಹಕ್ಕುತ್ಯಾಗ

ವೆಬ್ ಸೈಟ್ ನಲ್ಲಿ ಕೊಟ್ಟ ಮಾಹಿತಿ ಮತ್ತು ಸೂಚನೆಗಳ ಸಂದರ್ಭದಲ್ಲಿ ಒಂದು ವೇಳೆ ಆಂಗ್ಲ ಮತ್ತು ಬೇರೆ ಅನ್ಯ ಭಾಷೆಗಳ ಸಂಸ್ಕರಣಗಳ ಮಧ್ಯೆ ಯಾವುದೇ ಪ್ರಕಾರದ ಅಸಮಾನತೆ, ದೋಷ, ಅಥವಾ ಯಾವುದಾದರೂ ವಿಸಂಗತಿ ಕಂಡು ಬಂದಲ್ಲಿ ಅಂತ ಪರಿಸ್ಥಿತಿಯಲ್ಲಿ ಆಂಗ್ಲ ಸಂಸಕರಣವನ್ನೇ ಆದರ್ಶವೆಂದು ತಿಳಿಯಬೇಕು.

10) ನಮ್ಮನ್ನು ಸಂಪರ್ಕಿಸಿ

ನಿಮ್ಮ ಹೆಚ್ಚಿನ ಪ್ರಶ್ನೆಗಳಿಗಾಗಿ ಅಥವಾ ದೂರುಗಳಿಗಾಗಿ, ನಮ್ಮ ವೆಬ್ಸೈಟ್ ಮೂಲಕ ನೀವು ನಮ್ಮನ್ನು ನೇರವಾಗಿ ಸಂಪರ್ಕಿಸಬಹುದು ಅಥವಾ ಈ ವೆಬ್ಸೈಟ್ ಮೂಲಕ ನಿಮಗೆ ಒದಗಿಸಲಾದ ಇತರ ಇಮೇಲ್ ಲಿಂಕ್ಗಳಲ್ಲಿ ಅಥವಾ ಇತರ ಯಾವುದೇ ರೀತಿಯಲ್ಲಿ ನಮ್ಮನ್ನು ಸಂಪರ್ಕಿಸಬಹುದು. ನಾವು ಪ್ರಾಮಾಣಿಕವಾಗಿ ನಿಮಗೆ ಪ್ರತಿಕ್ರಿಯಿಸಲು ಪ್ರಯತ್ನಿಸುತ್ತೇವೆ. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ನಾವು ಈ ಮಾಹಿತಿಯನ್ನು ಬಳಸುತ್ತೇವೆ. ನಮ್ಮ ಗ್ರಾಹಕ ಸೇವೆಯನ್ನು ಉತ್ತೇಜಿಸಿಕೊಳ್ಳಲು ನಿಮ್ಮ ದೂರುಗಳನ್ನು ನಾವು ದಾಖಲಿಸಿಕೊಳ್ಳಬಹುದು.