ಮುಖಪುಟ   /  ನಮ್ಮನ್ನು ಕುರಿತು  /  ನಿರ್ದೇಶಕರ ಸಂದೇಶ
Mesage from the Directors

ನಿರ್ದೇಶಕರ ಸಂದೇಶ :-

shadow

MR. SANJEEV CHHIBBER / ಶ್ರೀ. ಸಂಜೀವ ಚಿಬ್ಬರ್

Director / ನಿರ್ದೇಶಕ

ಉದ್ಯಮಶೀಲ ಚೇತನವನ್ನು ಪೂರ್ಣ ಪ್ರಮಾಣದಲ್ಲಿ ಹೊಂದಿರುವ, ಗ್ಲೇಜ್ ಟ್ರೇಡಿಂಗ್ ಇಂಡಿಯಾದ ಸಂಸ್ಥಾಪಕ ಸದಸ್ಯ ಮತ್ತು ಪೂರ್ಣ ಕಾಲಿಕ ನಿರ್ದೇಶಕರಾಗಿರುವ ಶ್ರೀ. ಸಂಜೀವ ಚಿಬ್ಬರ್ ಧೈರ್ಯ ಮತ್ತು ದೃಢತೆಯೊಂದಿಗೆ ಅಪರಿಚಿತ ಉದ್ಯಮಗಳನ್ನು ಮಾಡುವ ಸಾಹಸವನ್ನು ಮಾಡುತ್ತಿದ್ದರು. ಅವರ ಕೌಟುಂಬಿಕ ವೆಚ್ಚಗಳನ್ನು ಪೂರೈಸಲು ಒಂದು ಸ್ಥಿರ ಕೆಲಸವನ್ನು ಹುಡುಕುತ್ತಿದ್ದ ವೇಳೆಯಲ್ಲಿ ನೇರ ಮಾರಾಟ ಉದ್ಯಮದ ಕಡೆಗಿನ ಪ್ರಯಾಣವನ್ನು ಇವರು ಆರಂಭಿಸಿದರು .

ತಮ್ಮ ಕಷ್ಟಕರ ಹಣಕಾಸಿನ ಪರಿಸ್ಥಿತಿ ಹಾಗೂ ವಿವಿಧ ಹಿನ್ನಡೆ ಹೊರತಾಗಿಯೂ ಒಂದು ದೊಡ್ಡ ಸಾಧನೆಯನ್ನು ಮಾಡಬೇಕೆಂಬ ಅವರ ಇಚ್ಛಾಶಕ್ತಿಯು ಧೈರ್ಯಗುಂದಲಿಲ್ಲ. ಹೃದಯದಲ್ಲಿ ಜನರಿಗೆ ಹತ್ತಿರವಾಗುವ ವ್ಯಕ್ತಿಯಾಗಿದ್ದು, ಅವರ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಮುಂದಕ್ಕೆ ನಡೆಯುತ್ತಾ ಹೋದರು. ನೇರ ಮಾರಾಟಕ್ಕೆ ಸಂಬಂಧಿಸಿದ ಅವರ ಪ್ರಾರಂಭಿಕ ಕಷ್ಟಕರ ದಿನಗಳು ಅವರ ನಿರ್ಧಾರವನ್ನು ದೃಢಪಡಿಸಿದಷ್ಟೇ ಅಲ್ಲದೆ ಜನರ ಜೀವನವನ್ನು ಮುಟ್ಟುವ ಮಿಷನ್ ಅನ್ನು ಉನ್ನತೀಕರಣಗೊಳಿಸುವಂತೆ ಮಾಡಿತು.

ಭಾರತೀಯ ನೇರ ವಹಿವಾಟು ಉದ್ಯಮಕ್ಕೆ ಅಂಗೀಕಾರ ಮತ್ತು ಗೌರವಾನ್ವಿತ ಸ್ಥಾನವನ್ನು ನೀಡಲು ನಿರ್ಧರಿಸಿದ್ದ ಶ್ರೀ ಸಂಜೀವ ಚಿಬ್ಬರ್ ರವರು ಗ್ಲೇಜ್ ಟ್ರೇಡಿಂಗ್ ಇಂಡಿಯಾದ ಬಗ್ಗೆ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹೊಂದಿದ್ದರು. ತಮ್ಮ ಓವರ್ಸೀಸ್ ವ್ಯವಹಾರ ಕಾರ್ಯತಂತ್ರದ ಒಂದು ಭಾಗವಾಗಿ, ವಿಶ್ವಾದ್ಯಂತ ಗ್ಲೇಜ್ ಉದ್ಯಮದ ವ್ಯಾಪಕ ನೆಟ್ವರ್ಕ್ ಅನ್ನು ಸ್ಥಾಪಿಸುವ ಮತ್ತು ವೈವಿಧ್ಯಮಯ ಸಾಮಾಜಿಕ ಮತ್ತು ಜನಾಂಗೀಯ ಹಿನ್ನೆಲೆಯನ್ನು ಹೊಂದಿರುವ ಜನರಿಗೆ ಆಸಕ್ತಿದಾಯಕ ವ್ಯಾಪಾರ ಅವಕಾಶಗಳನ್ನು ಒದಗಿಸುವ ಯೋಜನೆಯನ್ನು ಅವರು ಕೈಗೊಂಡರು.

" ಯಾರು ಸ್ವಇಚ್ಛೆಯಿಂದ ಕುಸಿತವನ್ನು ಎದುರಿಸಲು ಸಿದ್ದರಾಗುತ್ತಾರೊ ಅವರಿಗೆ ಡೆಸ್ಟಿನಿಯು ತನ್ನ ಹಾದಿಯನ್ನು ತೋರಿಸಿಕೊಡುತ್ತದೆ "


Managment

MR. CHETAN HANDA / ಶ್ರೀ ಚೇತನ್ ಹಂಡಾ

Director / ನಿರ್ದೇಶಕ

ಸಣ್ಣ ಮಟ್ಟಲ್ಲಿ ಉದ್ಯಮವನ್ನು ಪ್ರಾರಂಭಿಸಿ ದೊಡ್ಡ ಕನಸನ್ನು ಕಂಡ ಯುವ ಮತ್ತು ದಾರ್ಶನಿಕ ಉದ್ಯಮಿ ಶ್ರೀ. ಚೇತನ್ ಹಂಡಾರವರು ಗ್ಲೇಜ್ ಟ್ರೇಡಿಂಗ್ ಪ್ರೈ. ಲಿಮಿಟೆಡ್ ಎಂಬ ನೇರ ಮಾರಾಟ ಸಂಸ್ಥೆಯನ್ನು ಸಹ-ಸ್ಥಾಪಿಸಲು ಸ್ಥೈರ್ಯ ಮತ್ತು ಅಚಲಸಾಧನೆಯ ಸಂಯೋಜನೆಯನ್ನು ಬಳಸಿದರು. ಹಣಕಾಸಿನ ಮುಗ್ಗಟ್ಟು ಮತ್ತು ಸೀಮಿತ ಸಂಪನ್ಮೂಲಗಳ ಕಾರಣ ಚೇತನ್ ಜೀವನದ ಅತ್ಯಂತ ಪ್ರಾರಂಭದಲ್ಲೇ ಜೀವನೋಪಾಯವನ್ನು ಕಂಡುಕೊಳ್ಳಬೇಕಿದ್ದ ಅನಿವಾರ್ಯತೆಯನ್ನು ಉಂಟುಮಾಡಿದ್ದರೂ ಸಹ ದೊಡ್ಡ ಆಲೋಚನೆಗಳನ್ನು ಅಥವಾ ಚಿಂತನೆಗಳನ್ನು ಮಾಡಲು ಈ ವಿಷಯಗಳು ಅವರನ್ನು ಧೈರ್ಯಕೆಡಿಸಲಿಲ್ಲ.

ವಿಜ್ಞಾನ ಪದವೀಧರ ಮತ್ತು ಹಣಕಾಸಿನಲ್ಲಿ ಎಮ್ಬಿಎ ಪದವಿಯನ್ನು ಮಾಡಿರುವಂತಹ ಶ್ರೀ. ಚೇತನ್ ಹಂಡಾ ರವರು ತಮ್ಮ ವೃತ್ತಿಪರ ಜೀವನದ ಒಂದು ವಿನಮ್ರ ಆರಂಭವನ್ನು ಮಾಡಿದರು. ಆದಾಗ್ಯೂ, ಅತ್ಯಂತ ಶೀಘ್ರದಲ್ಲೇ ಒಂದು ಆಸಕ್ತಿದಾಯಕ ಕಲ್ಪನೆ ಅವರಲ್ಲಿ ಮೂಡಿತು ಮತ್ತು ಇದರ ಫಲವೇ 2003 ರಲ್ಲಿ ಹುಟ್ಟಿಕೊಂಡ ಗ್ಲೇಜ್ ಇಂಡಿಯಾ ಪ್ರೈ. ಲಿಮಿಟೆಡ್ ಸಂಸ್ಥೆ. ನೇರ ಮರಾಟದಲ್ಲಿ ’ಹಣಕ್ಕೆ ತಕ್ಕ ಮೌಲ್ಯ’ ಮತ್ತು ನೇರ ಮಾರಾಟ ವ್ಯವಹಾರದಲ್ಲಿ ಸಮಾನ ಅವಕಾಶಗಳನ್ನು ಕಲ್ಪಿಸುವರೆಡೆಗೆ ಬದ್ದವಾಗಿದ್ದು, ಈ ಸಂಸ್ಥೆಯನ್ನು ಅವರು ಯಶಸ್ವಿಯಾಗಿ ನಿರ್ಮಿಸಿದರು ಮತ್ತು ಅದನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ಉಳಿದ ವಿಷಯಗಳು ಈಗ ಇತಿಹಾಸ.

ನೈತಿಕತೆಯ ಕಡೆಗೆ ಒಲವನ್ನು ಹೊಂದಿರುವ ಶ್ರೀ. ಚೇತನ್ ಹಂಡಾರವರು ಶುದ್ಧ ಮತ್ತು ನೇರ ಕೆಲಸ ವಾತಾವರಣವನ್ನು ಒದಗಿಸುವ ಮೂಲಕ ಭಾರತೀಯ ನೇರ ಮಾರಾಟ ಉದ್ಯಮವನ್ನು ಪುನರ್ನಿರ್ಮಾಣ ಮಾಡಲು ನಿರ್ಧರಿಸಿದ್ದಾರೆ. ವ್ಯಾಪಾರವು ಕೇವಲ ಪ್ರೊಡಕ್ಟ್ ಗಳ ಮಾರಾಟವಷ್ಟೇ ಅಲ್ಲದೆ ಸಂಬಂಧ ನಿರ್ಮಾಣ ಪ್ರಕ್ರಿಯೆಯಾಗಿದ್ದು ಭಾರತದಂತಹ ವೈವಿಧ್ಯಮಯ ಸಂಸ್ಕೃತಿಯಲ್ಲಿ ನೆಟ್ವರ್ಕ್ ಮಾರ್ಕೆಟಿಂಗ್ ಪ್ರಚಂಡವಾದ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಅವರು ಯಾವಾಗಲೂ ನಂಬುತ್ತಾರೆ, ಬೆಳೆಯುತ್ತಿರುವ ಸಂಖ್ಯೆಯ ಉಪಯುಕ್ತ ಸಾಮಾಗ್ರಿಗಳು, ಸೇವೆಗಳು ವ್ಯಾಪಾರ ಅವಕಾಶಗಳನ್ನು ರಾಷ್ಟ್ರೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ಪ್ರಸಾರ ಮಾಡುವ ಉದ್ದೇಶ ಇವರದ್ದಾಗಿದೆ. ಕಂಪನಿಯ ಕುರಿತಾಗಿ ತಮ್ಮ ಬೆಳವಣಿಗೆಯ ಕಾರ್ಯತಂತ್ರ ಒಂದು ಭಾಗವಾಗಿ, ಭಾರತೀಯ ನೇರ ಮಾರಾಟದ ವಹಿವಾಟನ್ನು ವಿದೇಶದಲ್ಲಿ ಪ್ರಸಾರ ಮಾಡಲು ಮತ್ತು ವಿಶ್ವದಾದ್ಯಂತ ಹಂಚಿಕೆದಾರರ ಉತ್ತಮ ಸಂಪರ್ಕಿತ ನೆಟ್ವರ್ಕ್ ಅನ್ನು ಸ್ಥಾಪನೆ ಮಾಡುವ ಯೋಜನೆಯನ್ನು ಅವರು ಮಾಡಿದ್ದಾರೆ.

" ಯಶಸ್ಸು ಅಂತ್ಯವಲ್ಲ, ವೈಫಲ್ಯ ಮಾರಣಾಂತಿಕವಲ್ಲ. ಮುಂದುವರೆಯುವ ಧೈರ್ಯ ಮಾತ್ರ ಪ್ರಾಮುಖ್ಯ "


Managment

MR. SARABJEET SINGH / ಶ್ರೀ. ಸರಬಜೀತ್ ಸಿಂಗ್

Director / ನಿರ್ದೇಶಕ

ಶ್ರೀ. ಸರಬಜೀತ್ ಸಿಂಗ್ ರವರು ಓರ್ವ ವಾಣಿಜ್ಯ ಪದವೀಧರನಾಗಿದ್ದು, ಗ್ಲೇಜ್ ಟ್ರೇಡಿಂಗ್ ಇಂಡಿಯಾ ಪ್ರೈ. ಲಿಮಿಟೆಡ್ ನಲ್ಲಿ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ. ನವೀನ, ಅಸಾಂಪ್ರದಾಯಿಕ ಮತ್ತು ಪ್ರಗತಿಪರ ಆಲೋಚನೆಗಳು ಇವರದ್ದಾಗಿದೆ. ನಿರ್ದೇಶಕರಾಗಿ ಶ್ರೀ ಸರಬಜೀತ್ ಸಿಂಗ್ ರವರು ಕಂಪೆನಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಯಶಸ್ಸಿಗಾಗಿ ಮಹತ್ವಾಕಾಂಕ್ಷೆಯೊಂದಿಗೆ, ಸಣ್ಣ ಮಟ್ಟದಲ್ಲಿ ಪ್ರಾರಂಭಿಸಿ ದೊಡ್ಡ ಯಶಸ್ಸನ್ನು ಸಾಧಿಸಿದ್ದಾರೆ. ಉದ್ಯಮಶೀಲ ವಿಧಾನಗಳನ್ನು ಮತ್ತು ಚೈತನ್ಯವನ್ನು ಹೊಂದಿರುವ ಇವರ ಮಾರಾಟ ತರಬೇತಿ ಘಟಕಗಳು ಗ್ಲೇಜ್ ಟ್ರೇಡಿಂಗ್ ಇಂಡಿಯಾ ಕ್ಕಾಗಿ ಅತ್ಯಂತ ಸಮರ್ಥ ಮಾರಾಟ ತಂಡವನ್ನು ರೂಪಿಸಿದೆ.

ಭಾರತೀಯ ನೇರ ಮಾರಾಟದ ವಹಿವಾಟು ನೈತಿಕವಾದ ಉತ್ತಮ ಚಿತ್ರಣವನ್ನು ಸ್ಥಾಪಿಸುವ ಕಲ್ಪನೆಯನ್ನು ಶ್ರೀ. ಸರಬಜೀತ್ ಸಿಂಗ್ ರವರು ಹೊಂದಿದ್ದಾರೆ. ಕಂಪನಿಗೆ ತಮ್ಮ ಭವಿಷ್ಯದ ಅಭಿವೃದ್ಧಿ ತಂತ್ರದ ಒಂದು ಭಾಗವಾಗಿ, ಭಾರತದಲ್ಲಿ ಕಂಡುಬರಲ್ಪಡುವ ನೇರ ಮಾರಟ ವಹಿವಾಟನ್ನು ಬದಲಾಯಿಸಲು ಕಂಪೆನಿಯ ಮಾರಾಟ ತಂಡದಲ್ಲಿ ಧನಾತ್ಮಕ ಬದಲಾವಣೆಗಳನ್ನು ಪರಿಚಯಿಸಲು ಅವರು ಯೋಜಿಸಿದ್ದಾರೆ.

" ನಾಯಕರು ಉದಾಹರಣೆಗಳ ಮೂಲಕ ನಾಯಕತ್ವವನ್ನು ವಹಿಸುತ್ತಾರೆಯೆ ಹೊರತು ಕೇವಲ ಪದಗಳಿಂದಲ್ಲ "


Managment

MR. SUMIT KOHLI / ಶ್ರೀ. ಸುಮಿತ್ ಕೋಹ್ಲಿ

Director / ನಿರ್ದೇಶಕ

ಶ್ರೀ. ಸರಬಜೀತ್ ಸಿಂಗ್ ರವರು ಓರ್ವ ವಾಣಿಜ್ಯ ಪದವೀಧರನಾಗಿದ್ದು, ಗ್ಲೇಜ್ ಟ್ರೇಡಿಂಗ್ ಇಂಡಿಯಾ ಪ್ರೈ. ಲಿಮಿಟೆಡ್ ನಲ್ಲಿ ಆಪರೇಶನ್ಸ್ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ. ನಿರ್ದೇಶಕರಾಗಿ ಶ್ರೀ ಸರಬಜೀತ್ ಸಿಂಗ್ ರವರು ಕಂಪೆನಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸಂಪೂರ್ಣ ಸಂಕಲ್ಪ ಮತ್ತು ಮನೋಬಲದ ಜೊತೆಗೆ ಶ್ರೀ. ಸುಮಿತ್ ಕೋಹ್ಲಿರವರು ತಮ್ಮ ಗುರಿಗಳನ್ನು ಅರಿತುಕೊಂಡರು ಮತ್ತು ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಉನ್ನತ ಮ್ಯಾನೇಜ್ಮೆಂಟ್ ನ ಪೈಕಿ ತಮ್ಮ ಸ್ಥಾನವನ್ನು ಗಳಿಸಿಕೊಂಡರು. ತಮ್ಮ ವೈಯಕ್ತಿಕ ಮೇಲ್ವಿಚಾರಣೆಯ ಅಡಿಯಲ್ಲಿ, ಎಲ್ಲಾ ಸೇವೆ-ಸಂಬಂಧಿತ ಕುಂದುಕೊರತೆ ಮತ್ತು ದೂರುಗಳನ್ನು ನಿಭಾಯಿಸುವ ಶ್ರೀ. ಸುಮುತ್ ಕೋಹ್ಲಿರವರು ಸಂಪೂರ್ಣ ನೆಟ್ವರ್ಕನ ಸುಗಮ ಕಾರ್ಯಾಚರಣೆಗಾಗಿ ಜವಾಬ್ದಾರಿಯನ್ನು ಹೊಂದಿದ್ದಾರೆ.

2003 ರಿಂದ ಶ್ರೀ. ಸುಮಿತ್ ಕೋಹ್ಲಿ ರವರು ಗ್ಲೇಜ್ ನೊಂದಿಗೆ ಕಾರ್ಯನಿರ್ವಹಿಸಲು ಪ್ರಾರಂಭಿಸಿದರು ಮತ್ತು ಆನಂತರದಿಂದ ಕಂಪೆನಿಯ ಒಂದು ಅವಿಭಾಜ್ಯ ಅಂಗವಾಗಿ ಹೊರಹೊಮ್ಮಿದ್ದಾರೆ. ಎಲ್ಲಾ ಸೂಕ್ಷ್ಮ ವಿವರಣೆಗಳಿಗೂ ಗಮನವನ್ನು ನೀಡುವ ಶ್ರೀ. ಕೋಹ್ಲಿರವರು ಗ್ಲೇಜ್ ನಲ್ಲಿ ಉತ್ತಮ ಸೇವೆಯನ್ನು ನೀಡುವುದನ್ನು ಖಾತ್ರಿಪಡಿಸಿದರು. ಗ್ರಾಹಕರು ಮತ್ತು ಮಾರಾಟ ಪಾಲುದಾರರಿಗೆ ಅತ್ಯತ್ತಮ ಸೇವೆಗಳನ್ನು ಒದಗಿಸುವ ಮೂಲಕ ಅಸ್ತಿತ್ವದಲ್ಲಿರುವ ನೇರ ಮಾರಾಟದಲ್ಲಿ ಅದ್ವಿತೀಯ ಬದಲಾವಣೆಗಳನ್ನು ತರುವ ಯೋಚನೆ ಇವರದ್ದಾಗಿದೆ.

" ಇಚ್ಛಾಶಕ್ತಿ ಇದ್ದರೆ ಮನುಷ್ಯ ಯಾವುದನ್ನು ಕೂಡಾ ಮಾಡಬಹುದು "