ಮುಖಪುಟ   /  ನಮ್ಮನ್ನು ಕುರಿತು  /  ಗ್ಲೇಜ್ನ ಬಗ್ಗೆ

ಗ್ಲೇಜ್ ಕುರಿತಾಗಿ :-

shadow

ಇಬ್ಬರು ದಾರ್ಶನಿಕ ಯುವ ಉದ್ಯಮಿಗಳಾದ ಶ್ರೀ ಚಿಬ್ಬರ್ ಮತ್ತು ಶ್ರೀ ಚೇತನ್ ಹಾನ್‌ಡ ರವರ ಮೂಲಕ 2003 ರಲ್ಲಿ ಗ್ಲೇಜ್ ಇಂಡಿಯಾ ಒಂದು ನೇರ ಮಾರಾಟ ಕಂಪೆನಿಯಾಗಿ ಸ್ಥಾಪಿಗೊಂಡಿತು. ಸ್ವತಂತ್ರ ಉದ್ಯಮ ಮತ್ತು ಒಗ್ಗಟ್ಟಿನಲ್ಲಿನ ಯಶಸ್ಸಿಗೆ ಉತ್ತೇಜನವನ್ನು ನೀಡುವ ಜೊತೆಗೆ ವ್ಯಾಪಾರದೊಂದಿಗೆ ಸಂಬಂಧ ಹೊಂದಿರುವ ಜನರ ಜೀವನವನ್ನು ಸೃದ್ಧಗೊಳಿಸುತ್ತಾ ಗ್ರಾಹಕರ ಸಂತೋಷವನ್ನು ವರ್ಧಿಸುವುದು ಅವರ ಸಾಮಾನ್ಯ ಗುರಿಯಾಗಿತ್ತು.

ಮಾರುಕಟ್ಟೆ ಮತ್ತು ಹಂಚಿಕೆಯಲ್ಲಿ ತೊಡಗಿರುವ ಚ್ಯಾನಲ್ ಪಾಲುದಾರರೊಂದಿಗೆ ವ್ಯಾಪಾರದ ಆದಾಯವನ್ನು ಹಂಚಿಕೊಳ್ಳುವುದರೊಂದಿಗೆ ಉತ್ತಮ ಗುಣಮಟ್ಟದ ವಿಶೇಷವಾಗಿ ಕ್ರಾಫ್ಟ್ ಮಾಡಲಾದ ಎಫ್‌ಎಮ್‌ಸಿಜಿ ಪ್ರೊಡಕ್ಟ್ ಗಳನ್ನು ಸೋರ್ಸ್ ಮಾಡುವುದು ಮತ್ತು ಈ ಪ್ರೊಡಕ್ಟ್ ಗಳನ್ನು ಗ್ರಾಹಕರಿಗೆ ಒದಗಿಸುವುದೇ ಗ್ಲೇಜ್ ಕಾರ್ಪೊರೇಶನ್ ನ ಒಂದು ಸಂಕ್ಷಿಪ್ತ ಮೂಲಭೂತ ಜವಾಬ್ದಾರಿಯಾಗಿದೆ.

ಸಂಸ್ಥಾಪಕರ ಮತ್ತು ಅವರ ನೇತೃತ್ವದ ಮುಖ್ಯ ತಂಡಕ್ಕೆ ಸೇರಿದ ನಿರ್ವಹಣಾ ಸಿಬ್ಬಂದಿಗಳ ಸ್ಪಷ್ಟ ದೃಷ್ಟಿಕೋನ, ತೀವ್ರಾಸಕ್ತಿ, ಧನಾತ್ಮಕ ವರ್ತನೆ, ಮಹತ್ವಾಕಾಂಶೆ ಮತ್ತು ವಾಸ್ತವಿಕತೆಯು ಕಂಪೆನಿಯು ಹೆಚ್ಚು ತ್ವರಿತವಾಗಿ ಪ್ರಗತಿಯನ್ನು ಕಾಣುವಂತೆ ಮಾಡಿದೆ. ಇಂದು, ಒಂಡು ಮಿಲಿಯನ್ ಗೂ ಮೀರಿದ ಸ್ವತಂತ್ರ ಡಿಸ್ಟ್ರಿಬ್ಯೂಟರ್ ಗಳು ರಾಷ್ಟ್ರಾದ್ಯಂತ ಗ್ಲೇಜ್ ಉದ್ಯಮ ಮಾದರಿಯನ್ನು ತಮ್ಮ ಕನಸುಗಳನ್ನು ಪೂರ್ತಿಮಾಡುವ ಉದ್ದೇಶದಿಂದ ಅನುಸರಿಸುತ್ತಿದ್ದಾರೆ. ಉತ್ತಮವಾಗಿ ಗ್ರೂಮ್ ಮಾಡಲ್ಪಟ್ಟ ಪ್ಯಾನ್ ಇಂಡಿಯಾ ಫ್ರಾಂಚೈಸಿಯ ಬೆಂಬಲ ಇದಕ್ಕಿದೆ. ಸ್ವತಂತ್ರ ಡಿಸ್ಟ್ರಿಬ್ಯೂಟರ್ ಗಳ ಸಮರ್ಥ ಮತ್ತು ವಿಶಾಲ ವ್ಯಾಪಕವನ್ನು ಹೊಂದಿರುವ ನೆಟ್ವರ್ಕ್ ಪ್ರತಿಯೊಬ್ಬ ಬಳಕೆದಾರನಿಗೂ ಪ್ರೊಡಕ್ಟ್ ಗಳ ಸುಲಭ ಲಭ್ಯತೆಯನ್ನು ಖಾತ್ರಿಪಡಿಸುತ್ತದೆ, ವ್ಯಕ್ತಿಯು ದೇಶದ ಅತ್ಯಂತ ದೂರದ ಸ್ಥಳಗಳಲ್ಲಿ ಇದ್ದರೂ ಸಹ ಇದು ಪ್ರೊಡಕ್ಟ್ ಗಳ ಸುಲಭ ಲಭ್ಯತೆಯನ್ನು ಸಾಧ್ಯವಾಗಿಸುತ್ತದೆ.

ಕಳೆದ 10 ವರ್ಷಗಳ ಸಮಯದಿಂದ ಗ್ಲೇಜ್ ಟ್ರೇಡಿಂಗ್ ಗಮನಾರ್ಹ ಪರಿಣತಿಯನ್ನು ತನ್ನದಾಗಿಸಿಕೊಂಡಿದೆ. ಆಶಾಭಾವನೆ, ಬಹುಮಾನ, ಮಾಲೀಕತ್ವ, ಒಗ್ಗಟ್ಟು ಮತ್ತು ಗೆಲ್ಲುವ ಪ್ರವೃತ್ತಿ – ಇತ್ಯಾದಿಗಳಂತಹ ಜೀವನದ ವಿನಮ್ರ ಮೌಲ್ಯಗಳು ಮತ್ತು ಆಕಾಂಕ್ಷೆಗಳೊಂದಿಗೆ ಸ್ಥಾಪನೆಯಾದ ಗ್ಲೇಜ್ ಕಂಪೆನಿಯು ಅಸಾಧಾರಣ ಫಲಿತಾಂಶವನ್ನು ಸಾಧಿಸಲು ಪ್ರತಿಯೊಬ್ಬ ವ್ಯಕ್ತಿಗೂ ಸೂಕ್ತವಾಗುವಂತಹ ಅತ್ಯಧಿಕ ಪ್ರಮಾಣಾದ ಅವಕಾಶವನ್ನು ಒದಗಿಸುತ್ತದೆ. ವಿತರಕರು ತಮ್ಮ ಗುರಿಯನ್ನು ಸಾಧಿಸಲು ಸಹಾಯ ಮಾಡಲು ಈ ಪರಿವರ್ತನಾ ಪ್ರಕ್ರಿಯೆಯನ್ನು ವ್ಯಾಪಕವಾದ ವ್ಯವಹಾರ ತರಬೇತಿ, ಮಾರ್ಗದರ್ಶನ ಮತ್ತು ಸ್ವಯಂ-ಸಬಲೀಕರಣ ಉಪಕ್ರಮಗಳ ಮೂಲಕ ಅನುದಾನಿಸಲಾಗುತ್ತದೆ, ಮಾರ್ಗದರ್ಶಿಸಲಾಗುತ್ತದೆ ಮತ್ತು ಬೆಂಬಲಿಸಲಾಗುತ್ತದೆ.

ಅಗತ್ಯವಿರುವ ವಿವರಣೆ ಮತ್ತು ಪ್ರೊಡಕ್ಟ್ ನ ನಿದರ್ಶನಗಳೊಂದಿಗೆ ಗ್ರಾಹಕರ ಮನೆಬಾಗಿಲಿಗೆ ಹೋಗಿ ಗುಣಮಟ್ಟದ ಪ್ರೊಡಕ್ಟ್ ಗಳನ್ನು ನೇರವಾಗಿ ಮಾರಾಟ ಮಾಡುವುದೇ ನೇರ ಮಾರಾಟ ಪ್ರಕ್ರಿಯೆಯಾಗಿದೆ. ರಿಟೇಲ್ ಮಾರಾಟದ ಸಾಂಪ್ರದಾಯಿಕ ಸ್ಟೋರ್ ಮಾದರಿಯನ್ನು ಅನುಸರಿಸದೆ ನಿಷ್ಠೆ ಮತ್ತು ಬಹುಮಾನ ಕಾರ್ಯಕ್ರಮಗಳ ಮೂಲಕ ಗ್ರಾಹಕರೊಂದಿಗೆ ದೀರ್ಘಕಾಲಿಕ ಸಂಬಂಧವನ್ನು ಬೆಳೆಸುವ ಉದ್ದೇಶವನ್ನು ಕೂಡಾ ಇದು ಹೊಂದಿದೆ.