sanjeev sir

ಶ್ರೀ ಸಂಜೀವ ಛೀಬ್ಬರ್ ಫೌಂಡರ್ ಡೈರೆಕ್ಟರ್

" ಸಂಘರ್ಷ ಅದೆಷ್ಟು ಪ್ರಮಾಣದಲ್ಲಿ ಕಠಿಣ ಇರುವುದೋ ಗೆಲುವೂ ಕೂಡ ಅಷ್ಟೇ ಪ್ರಮಾಣದಲ್ಲಿ ಸೊಗಸಾಗಿರುವುದು’”

ಗಟ್ಟಿಮುಟ್ಟಾದ ಇರಾದೆ ಹಾಗೂ ಉನ್ನತವಾದ ಯೋಚನೆಗಳನ್ನು ಹೊಂದಿದ ಶ್ರೀ ಸಂಜೀವ ಛೀಬ್ಬರ್ ತಮ್ಮ ಸಾಹಸ ಹಾಗೂ ಅವುಗಳು ಬಲದ ಮೇಲೆ ಪ್ರತಿ ಸವಾಲುಗಳನ್ನು ಬಗೆಹರಿಸುವ ಕೌಶಲವನ್ನು ಹೊಂದಿದ್ದಾರೆ. ಕಾರ್ಯಕ್ಷೇತ್ರ ಅದಾವುದೇ ಆಗಿರಲಿ, ಯಶಸ್ಸಿನ ಪ್ರತಿ ಗುರಿಯನ್ನು ಭೇಧಿಸುವುದು ಇವರಿಗೆ ಗೊತ್ತು. ‘ಗ್ಲೇಜ್ ಟ್ರೇಡಿಂಗ್ ಇಂಡಿಯಾ ಪ್ರೈ.ಲಿ.’ ಸಂಸ್ಥೆಯ ಫೌಂಡರ್ ಡೈರೆಕ್ಟರ್ ಆಗಿರುವ ಶ್ರೀ ಸಂಜೀವ ಛೀಬ್ಬರ್ ಒಬ್ಬ ಪಳಗಿದ ಉದ್ಯಮಿಯ ಹಾಗೆ ತಮ್ಮ ಯಶಸ್ಸಿನ ಸಾಧನೆಯನ್ನು ಪ್ರತಿ ವಿಭಾಗದಲ್ಲೂ ಆಚರಿಸ ಬಯಸುತ್ತಾರೆ. ಒಂದು ಸಮಯದಲ್ಲಿ ಮನೆಯ ಖರ್ಚಿನಲ್ಲಿ ತಮ್ಮದೂ ಒಂದಿಷ್ಟು ಯೋಗದಾನ ಮಾಡುವ ಸಲುವಾಗಿ ನೌಕರಿಯನ್ನು ಅರಸುತ್ತಿದ್ದ ಶ್ರೀ ಸಂಜೀವ ಛೀಬ್ಬರ್ ಈ ಡೈರೆಕ್ಟ್ ಸೇಲಿಂಗ್ ಉದ್ಯೋಗದಲ್ಲಿ ತಮ್ಮ ಅಜೇಯ ಹಾಗೂ ದೀರ್ಘಕಾಲೀನ ಯಾನವನ್ನು ಪ್ರಾರಂಭಿಸಿದ್ದರು. ಶುರುವಾತಿನಲ್ಲಿ ಸಂಘರ್ಷದ ಮುಳ್ಳುಗಳಿಂದ ತುಂಬಿದ ಮಾರ್ಗಗಳ ಮೂಲಕ ಅನೇಕ ಬಾರಿ ಸಾಗಬೇಕಾಗಿ ಬಂದರೂ ಕೂಡ ಇವರು ಪರಿಸ್ಥಿತಿ ಹಾಗೂ ಅಸಫಲತೆಗಳನ್ನೇ ತಮ್ಮ ಯಶಸ್ಸಿನ ಆಧಾರವನ್ನಾಗಿ ಮಾಡಿಕೊಂಡರು. ಹೃದಯದಿಂದ ಎಲ್ಲರಿಗೂ ಹತ್ತಿರ ಎನಿಸುವ ಮತ್ತು ವಿನಮ್ರ ವ್ಯಕ್ತಿತ್ವದ ಒಡೆಯರಾದ ಶ್ರೀ ಸಂಜೀವ ಛೀಬ್ಬರ್ ಒಂದೊಂದು ಹೆಜ್ಜೆಯನ್ನೂ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಹಾಕಿದರು.

ಕೊಟ್ಟು ಇದನ್ನು ಒಂದು ಹೊಸ ಔನ್ನತ್ಯಕ್ಕೇರಿಸಲು ದೃಢ ಸಂಕಲ್ಪಿತರಾದ ಶ್ರೀ ಸಂಜೀವ ಛೀಬ್ಬರ್ ‘ಗ್ಲೇಜ್ ಟ್ರೇಡಿಂಗ್ ಇಂಡಿಯಾ ಪ್ರೈ.ಲಿ.ಗಾಗಿ ಒಂದು ಮಹತ್ವಾಕಾಂಕ್ಷೆಯ ಬಿಜಿನೆಸ್ ಪ್ಲಾನ್ ನ್ನು ಸಿದ್ಧ ಪಡಿಸಿರುತ್ತಾರೆ. ತಮ್ಮ ವಿಶ್ವ ವ್ಯಾಪಾರ ರಣನೀತಿಯ ಒಂದು ಅಂಗದ ಮೇರೆಗೆ ಇವರು ವಿಶ್ವ ಮಟ್ಟದಲ್ಲಿ ಗೇಲ್ ವೇ ಬಿಜಿನೆಸ್ ನ ವ್ಯಾಪಕ ನೆಟ್ ವರ್ಕ್ ನ್ನು ವಿಸ್ತರಿಸಲು ವಿಭಿನ್ನ ಜಾತಿ, ಮತ, ಪಂಥದ ಜನರಿಗಾಗಿ ಒಂದು ಪರಿಣಾಮಕಾರಿಯಾದ ಉದ್ಯೋಗಾವಕಾಶವನ್ನು ಪ್ರಸ್ತುತ ಪಡಿಸುವ ಯೋಜನೆಯನ್ನು ಮಾಡಿರುತ್ತಾರೆ.

ಶ್ರೀ ಚೇತನ ಹಾಂಡಾ ಫೌಂಡರ್ ಡೈರೆಕ್ಟರ್

“ಅಸಫಲತೆ ಜೀವನದ ಕೊನೆಯಲ್ಲ, ಹೊರತು ಅದು ಯಶಸ್ಸಿನ ಪ್ರಾರಂಭ”

ಯಾರೇ ಆಗಲಿ ತಮ್ಮ ಮೈಕಟ್ಟು, ಎತ್ತರಗಳಿಂದ ದೊಡ್ಡವರು ಎನಿಸಿಕೊಳ್ಳದೇ ತಮ್ಮ ವಿಚಾರಗಳಿಂದ ಮಹತ್ತರರಾಗಿರುತ್ತಾರೆ. ಅವರ ಆ ವಿಚಾರ, ಯೋಚನೆಯ ಆಕಾರವೇ ಅವರ ಕನಸುಗಳನ್ನು ನನಸು ಮಾಡಲು ಸಹಾಯ ಮಾಡುತ್ತದೆ. ಈ ಮಾತು ಯೌವನದ ಊರ್ಜೆಯಿಂದ ತುಂಬಿದ ಉದ್ಯಮಿ ಶ್ರೀ ಚೇತನ ಹಾಂಡಾ ಇವರ ಜೀವನದಲ್ಲಿ ಸರಿಯಾಗಿ ಹೊಂದುತ್ತದೆ. ಶ್ರೀ ಚೇತನ ಹಾಂಡಾ ತಮ್ಮ ಕರಿಯರ್ ನ್ನು ಸಣ್ಣ ಮಟ್ಟದಲ್ಲೇ ಪ್ರಾರಂಭಿಸಿದ್ದರು, ಆದರೆ ಇವರ ಕನಸುಗಳು ಅಗಾಧ ಪ್ರಮಾಣದಲ್ಲಿದ್ದವು. ಹಾಗಾಗಿ ಧೈರ್ಯ ಹಾಗೂ ಕಾರ್ಯ ಸಂಯೋಜನೆಗಳ ಮೂಲಕ ಇವರು ಭಾರತದ ವಿಶಿಷ್ಟ ತರಹದ ಡೈರೆಕ್ಟ್ ಸೇಲಿಂಗ್ ಕಂಪನಿ; ಗ್ಲೇಜ್ ಟ್ರೇಡಿಂಗ್ ಇಂಡಿಯಾ ಪ್ರೈ.ಲಿ. ನ ಸಹ-ಸಂಸ್ಥಾಪಕರಾದರು.

ವಿಜ್ಞಾನ ವಿಷಯದಲ್ಲಿ ಗ್ರ್ಯಾಜುಯೆಟ್ ಹಾಗೂ ಫೈನಾನ್ಸ್ ನಲ್ಲಿ ಎಮ್.ಬಿ.ಎ. ಮಾಡಿರುವ ಶ್ರೀ ಚೇತನ ಹಾಂಡಾ ತಮ್ಮ ಔದ್ಯಮಿಕ ಯಾತ್ರೆಯನ್ನು ತುಂಬಾ ವಿನಮ್ರ ರೀತಿಯಿಂದಲೇ ಪ್ರಾರಂಭಿಸಿದ್ದರು. ಆದರೆ ಬಹಳ ಬೇಗನೆಯೇ ಇವರೊಂದು ರೋಚಕ ಹಾಗೂ ಉತ್ಕೃಷ್ಟ ಐಡಿಯಾವನ್ನು ಕಂಡುಕೊಂಡರು. ಇದರ ಪರಿಣಾಮವಾಗಿಯೇ 2003 ನೇ ಇಸವಿಯಲ್ಲಿ ಗ್ಲೇಜ್ ಟ್ರೇಡಿಂಗ್ ಇಂಡಿಯಾ ಪ್ರೈ.ಲಿ. ನ ಉದಯವಾಯಿತು. ಡೈರೆಕ್ಟ್ ಸೇಲಿಂಗ್ ಬಿಜಿನೆಸ್ ನಲ್ಲಿ ಮಾದರಿ ರೂಪದ ಅವಕಾಶಗಳನ್ನು ನಿರ್ಮಿಸಲು ಕಟಿಬದ್ಧರಾದ ಶ್ರೀ ಚೇತನ ಹಾಂಡಾ ಮೆಲ್ಲ-ಮೆಲ್ಲಗೆ ಯಶಸ್ಸಿನ ಮೆಟ್ಟಿಲುಗಳನ್ನು ಏರತೊದಗಿದರು ಹಾಗೂ ಈ ಬಿಜಿನೆಸ್ ನಲ್ಲಿ ಒಂದು ಹೊಸ ಔನ್ನತ್ಯವನ್ನು ಸಾಧಿಸಿದರು.

ನೈತಿಕ ಮೌಲ್ಯಗಳ ಒಡೆಯರಾದ ಶ್ರೀ ಚೇತನ ಹಾಂಡಾ, ಸದೈವವೂ ಕಾರ್ಯದಲ್ಲಿ ಪಾರದರ್ಶಿ ಹಾಗೂ ಉತ್ತಮ ಕಾರ್ಯ ಪರಿಸರವನ್ನು ಉಂಟು ಮಾಡಿ ಭಾರತೀಯ ಡೈರೆಕ್ಟ್ ಸೇಲಿಂಗ್ ಉದ್ಯಮಕ್ಕೆ ಒಂದು ಹೊಸ ಗಟ್ಟಿ ಆಕಾರವನ್ನು ತಂದು ಕೊಡುವಲ್ಲಿ ಸಮರ್ಪಿತರಾಗಿರುತ್ತಾರೆ. ಭಾರತದಂಥ ಸಾಂಸ್ಕೃತಿಕ ವಿವಿಧತೆ ಉಳ್ಳ ದೇಶದಲ್ಲಿ ನೆಟ್ ವರ್ಕ್ ಮಾರ್ಕೆಟಿಂಗ್ ನಂಥ ಬಿಜಿನೆಸ್ ನ ವಿಕಾಸದಲ್ಲಿ ಅಪಾರ ಸಂಭಾವನೆಗಳಿವೆಯೆಂಬ ವಿಶ್ವಾಸವನ್ನು ಇವರು ಹೊಂದಿರುತ್ತಾರೆ. ಅವುಗಳಲ್ಲಿ ಕೇವಲ ಉತ್ಪನ್ನಗಳ ಕೊಡು-ತೆಗೆದುಕೊಳ್ಳುವಿಕೆಯಷ್ಟೇ ಅಲ್ಲದೇ ಇಲ್ಲಿ ಹೊಸ-ಹೊಸ ಸಂಬಂಧಗಳೂ ಆಗುತ್ತಿರುತ್ತವೆ ಎಂದು ಇವರ ಅನಿಸಿಕೆ. ಈ ಬಿಜಿನೆಸ್ ಮುಖಾಂತರ ಇವರ ಉದ್ದೇಶವು; ಉಪಯುಕ್ತ ಉತ್ಪನ್ನಗಳು, ಸೇವೆ, ಹಾಗೂ ಬಿಜಿನೆಸ್ ನ ಸಂಭಾವನೆಗಳನ್ನು ರಾಷ್ಟ್ರೀಯ-ಅಂತಾರಾಷ್ಟ್ರೀಯ ಸ್ತರದ ವರೆಗೂ ವಿಸ್ತರಿಸುವುದು ಆಗಿದೆ. ಕಂಪನಿಯ ವಿಕಾಸದ ರಣನೀತಿಯ ಮೇರೆಗೆ ಭಾರತೀಯ ಡೈರೆಕ್ಟ್ ಸೇಲಿಂಗ್ ಉದ್ಯಮವನ್ನು ಪ್ರಪಂಚದೆಲ್ಲೆಡೆ ವಿಸ್ತರಿಸುವುದು ಹಾಗೂ ಒಂದು ಸಮೃದ್ಧ ನೆಟ್ ವರ್ಕ್ ನ್ನು ಸ್ಥಾಪಿಸುವುದು ಇವರ ಯೋಜನೆಯಾಗಿದೆ.

ಶ್ರೀ ಸರಬಜೀತ್ ಸಿಂಹ ಅರನೇಜಾ ಡೈರೆಕ್ಟರ್

“ನೀವು ನಿಮ್ಮ ಭವಿಷ್ಯವನ್ನು ಬದಲಿಸಲು ಸಾಧ್ಯವಿಲ್ಲ, ಆದರೆ ನಿಮ್ಮ ಹವ್ಯಾಸ, ಅಭ್ಯಾಸಗಳನ್ನು ಬದಲಿಸಿಕೊಳ್ಳಬಹುದು. ಆ ಮೂಲಕ ನಿಶ್ಚಿತವಾಗಿಯೂ ನಿಮ್ಮ ಬದಲಾದ ಅಭ್ಯಾಸಗಳಿಂದ ನಿಮ್ಮ ಭವಿಷ್ಯವೂ ಬದಲಾಗುವುದು”

ನೇತೃತ್ವ (ಲೀಡರ್ ಶಿಪ್) ಹಾಗೂ ಬಿಜಿನೆಸ್ ನ ಪ್ರತಿಯೊಂದು ಹಂತದಲ್ಲಿ ಪಳಗಿದ ವ್ಯಕ್ತಿ ಶ್ರೀ ಸರಬಜೀತ್ ಸಿಂಹರು ಕಾಮರ್ಸ್ ನಲ್ಲಿ ಸ್ನಾತಕ ಪದವಿ ಪಡೆದಿದ್ದಾರೆ ಹಾಗೂ ತಮ್ಮ ಹೊಸ, ಪಾರಂಪರಿಕವಲ್ಲದ ಮತ್ತು ಪ್ರಗತಿಶೀಲ ವಿಚಾರಗಳೊಂದಿಗೆ ಗ್ಲೇಜ್ ಟ್ರೇಡಿಂಗ್ ಇಂಡಿಯಾ ಪ್ರೈ.ಲಿ. ನ ಸೇಲ್ಸ್ ಹಾಗೂ ಮಾರ್ಕೆಟಿಂಗ್ ಡಿವಿಷನ್ ನಲ್ಲಿ ಪ್ರಮುಖ ಹುದ್ದೆ, ಹೊಣೆಯನ್ನು ನಿಭಾಯಿಸುತ್ತಿದ್ದಾರೆ. ಇವರು ಕಂಪನಿಯ ನಿರ್ದೇಶಕರೂ ಆಗಿರುತ್ತಾರೆ. ಯಾವುದೇ ಪರಿಸ್ಥಿತಿಯಲ್ಲಿ ಯಶಸ್ವೀ ಆಗುವ ಹಂಬಲಿಗರಾದ ಶ್ರೀ ಸರಬಜೀತ್ ಅರನೇಜಾ ಇವರು ಸಣ್ಣದಾಗಿ ಪ್ರಾರಂಭಿಸಿ ದೊಡ್ಡ ಯಶಸ್ಸನ್ನು ಅರ್ಜಿಸಿರುತ್ತಾರೆ. ಇವರ ಅದ್ಭುತ ಟ್ರೇನಿಂಗ ಮಾಡ್ಯೂಲ್. ಔದ್ಯಮಿಕ ನಿಲುವುಗಳ ಬಲದಿಂದ ಗ್ಲೇಜ್ ಟ್ರೇಡಿಂಗ್ ಇಂಡಿಯಾ ಪ್ರೈ.ಲಿ.ನಲ್ಲಿ ಒಂದು ಅರ್ಹ ಹಾಗೂ ಸಕ್ಷಮ ಸೇಲ್ಸ್ ನ ಸಂಘಟನೆ ಉಂಟಾಗಿದೆ. ಶ್ರೀ ಸರಬಜೀತ್ ಸಿಂಹ ಅರನೇಜಾರ ಬಹುಮುಖ ಪ್ರತಿಭೆಯ ನೇತೃತ್ವದಲ್ಲಿ ಗ್ಲೇಜ್ ನ ಸೇಲ್ಸ್ ಟೀಮು ನಿರಂತರವಾಗಿ ಸಕಾರಾತ್ಮಕ ರೂಪದಲ್ಲಿ ಗಟ್ಟಿಗೊಳ್ಳುತ್ತಿದೆ.

ಶ್ರೀ ಸರಬಜೀತ್ ಸಿಂಹ ಅರನೇಜಾರ ಪರಿಕಲ್ಪನೆಯು ಇಂಡಿಯನ್ ಡೈರೆಕ್ಟ್ ಸೇಲಿಂಗ್ ಉದ್ಯಮಕ್ಕೆ ಒಂದು ಸ್ವಚ್ಛ ಹಾಗೂ ನೈತಿಕ ಮೌಲ್ಯ ತುಂಬಿದ ಚಿತ್ರಣ ಕಟ್ಟುವುದು ಆಗಿದೆ. ಕಂಪನಿಯ ಭವಿಷ್ಯದ ವಿಕಾಸದ ರಣನೀತಿಯ ಮೇರೆಗೆ ಕಂಪನಿಯ ಸೇಲ್ಸ್ ಫಾರ್ಮ್ ನಲ್ಲಿ ಒಂದು ಸಕಾರಾತ್ಮಕ ಬದಲಾವಣೆಯನ್ನು ತಂದು ಅದು ಇಡೀ ಭಾರತದಲ್ಲಿ ಡೈರೆಕ್ಟ್ ಸೇಲಿಂಗ್ ನ ಹಿನ್ನೆಲೆಯನ್ನೇ ಬದಲಿಸುತ್ತದೆ ಎಂದವರು ಹೇಳುತ್ತಾರೆ.

ಶ್ರೀ ಸುಮಿತ ಕೊಹಲಿಡೈರೆಕ್ಟರ್

“ಮಾನವನೇನಾದರೂ ಒಂದು ವೇಳೆ ಯಾವುದಾದರೂ ಕಾರ್ಯವನ್ನು ಮಾಡುವ ಸಂಕಲ್ಪ ಮಾಡಿದ್ದೇ ಆದರೆ ಯಾವುದೇ ಅಸಂಭವವೆಂದು ತೋರುವ ಕೆಲಸವೂ ಸಂಭವವಾಗಿಬಿಡುತ್ತದೆ.”

ಆತ್ಮವಿಶ್ವಾಸದಿಂದ ತುಂಬಿ ತುಳುಕುವ ಹಾಗೂ ಸ್ವಭಾವದಿಂದ ಬಹಳೇ ವಿನಮ್ರರಾದ ಶ್ರೀ ಸುಮಿತ ಕೊಹಲಿ ಗ್ಲೇಜ್ ಟ್ರೇಡಿಂಗ್ ಇಂಡಿಯಾ ಪ್ರೈ.ಲಿ.ನ ಆಪರೇಶನ್ ಡಿವಿಷನ್ ವಿಭಾಗವನ್ನು ಮುನ್ನಡೆಸುವ ಕಾರ್ಯದೊಂದಿಗೆ ಕಂಪನಿಯ ನಿದೇಶಕ ಹುದ್ದೆಯ ಹೊಣೆಯನ್ನೂ ಹೊತ್ತಿರುತ್ತಾರೆ. ಇವರು ತಮ್ಮ ಸಂಕಲ್ಪ ಹಾಗೂ ಕರ್ತೃತ್ವ ಶಕ್ತಿಗಳ ಬಲದಿಂದ ಉನ್ನತ ಲಕ್ಷ್ಯವನ್ನು ಪ್ರಾಪ್ತ ಮಾಡಿಕೊಂಡಿರುತ್ತಾರೆ ಹಾಗೂ ತುಂಬಾ ಕಡಿಮೆ ಅವಧಿಯಲ್ಲೇ ಕಂಪನಿಯ ಉನ್ನತ ನಿರ್ವಹಣಾ ಕಾರ್ಯದಲ್ಲಿ ತಮ್ಮದೊಂದು ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ. ಕಂಪನಿಯ ಸೇವೆ ಹಾಗೂ ಸಾಗಾಣಿಕೆಗೆ ಸಂಬಂಧಿಸಿದ ದೂರುಗಳನ್ನು ವೈಯಕ್ತಿಕವಾಗಿ ಉಸ್ತುವಾರಿ ಮಾಡಿ ಅವನ್ನು ಬಗೆ ಹರಿಸುವ ನಿಟ್ಟಿನಲ್ಲಿ ಪಳಗಿರುವ ಶ್ರೀ ಸುಮಿತ ಕೊಹಲಿ ಕಂಪನಿಯ ಸಂಪೂರ್ಣ ನೆಟ್ ವರ್ಕ್ ಸುರಳೀತವಾಗಿ ಸಂಚಾಲನೆ ಆಗುವುದಕ್ಕೆ ಜವಾಬ್ದಾರರಾಗಿರುತ್ತಾರೆ.

ಗ್ಲೇಜ್ ನೊಂದಿಗೆ ಶ್ರೀ ಸುಮಿತ ಕೊಹಲಿ ಇವರ ಯಾತ್ರೆಯು 2003 ನೇ ವರ್ಷದಿಂದಲೇ ಶುರುವಾಯಿತು. ಅವತ್ತಿನಿಂದಲೇ ಇವರು ಕಂಪನಿಯ ಒಂದು ಅಭಿನ್ನ ಅಂಗವಾಗಿದ್ದಾರೆ. ತುಂಬಾನೇ ಸೂಕ್ಷ್ಮ ದೃಷ್ಟಿಯುಳ್ಳ ಶ್ರೀ ಸುಮಿತ ಕೊಹಲಿ ಗ್ರಾಹಕರು ಹಾಗೂ ಮಾರಾಟ ವಿಭಾಗದ ಜನರಿಗೆ ಉತ್ಕೃಷ್ಟ ಸೇವೆ ಒದಗಿಸಿ ಸದ್ಯದ ಡೈರೆಕ್ಟ್ ಸೇಲಿಂಗ್ ಉದ್ಯಮದಲ್ಲಿ ಉಲ್ಲೇಖನೀಯ ಪರಿವರ್ತನೆಯನ್ನು ತರುವಲ್ಲಿ ಕಟಿಬದ್ಧರಾಗಿರುತ್ತಾರೆ.

ಶ್ರೀ ಸಂಜಯ ವರ್ಮಾ ಡೈರೆಕ್ಟರ್

“ವಿಚಾರದಿಂದ ಕಾರ್ಯದ ಉತ್ಪತ್ತಿಯಾಗುತ್ತದೆ, ಕರ್ಮದಿಂದ ಅಭ್ಯಾಸ ಹುಟ್ಟುತ್ತದೆ, ಹಾಗೂ ಸತ್-ಚರಿತ್ರದಿನದ ನಿಮ್ಮ ಅದೃಷ್ಟ ನಿರ್ಮಾಣವಾಗುತ್ತದೆ.”

ಪಂಜಾಬಿನ ಲುಧಿಯಾನಾ ಜಿಲ್ಲೆಯ ಒಂದು ಸಾಮಾನ್ಯ ಕುಟುಂಬದಲ್ಲಿ ಜನ್ಮ ತಳೆದ ಶ್ರೀ ಸಂಜಯ ವರ್ಮಾ, ಬಾಲ್ಯ ಕಾಲದಿಂದಲೇ ಮಹತ್ತರ ಆಕಾಂಕ್ಷೆ ಉಳ್ಳ ಹಾಗೂ ಪ್ರತಿಭಾ ಸಂಪನ್ನ ವ್ಯಕ್ತಿತ್ವದ ಒಡೆಯರಾಗಿದ್ದರು. ಸ್ವಭಾವದಿಂದ ಸದಾ ಹಸನ್ಮುಖಿ ಮತ್ತು ಬಿಜಿನೆಸ್ ನ ಸೂಕ್ಷ್ಮ ಸಂಗತಿಗಳಲ್ಲಿ ಪಳಗಿರುವ ಶ್ರೀ ಸಂಜಯ ಜೀ ತಾವು ಮಾಡುವ ಪ್ರತಿಯೊಂದು ಕಾರ್ಯವನ್ನು ಪರಿಪೂರ್ಣತೆಯೊಂದಿಗೆ ಹಾಗೂ ಸ್ವಲ್ಪ ಬೇರೆಯೇ ತೆರನಾದ ತಮ್ಮದೇ ಆದ ರೀತಿಯಲ್ಲಿ ಮಾಡಿ ಮುಗಿಸುವುದಕ್ಕೆ ಪ್ರಸಿದ್ಧರಾಗಿದ್ದಾರೆ. ಹಾಗಾಗಿಯೇ ತಮ್ಮ ಸ್ನಾತಕ ಪದವಿಯನ್ನು ಪೂರ್ಣಗೊಳಿಸಿದ ನಂತರ ಇವರು ಯಾವುದಾದರೂ ಒಂದು ಸರ್ಕಾರಿ ಕೆಲಸಕ್ಕೆ ಹೋಗುವ ಬದಲು ಬಿಜಿನೆಸ್ ನ ಮಾರ್ಗದಲ್ಲಿ ಯಶಸ್ಸನ್ನು ಕಾಣುವ ಕನಸನ್ನು ಕಂಡರು. ಹಾಗಾಗಿ ಇಂದು ಗ್ಲೇಜ್ ಕಂಪನಿಯ ಡೈರೆಕ್ಟರ್ ಹುದ್ದೆಯನ್ನು ನಿಭಾಯಿಸುತ್ತಾ ತಮ್ಮ ಅಭೂತಪೂರ್ವ ಸೇವೆಯನ್ನು ನೀಡುತ್ತಿದ್ದಾರೆ.

ಶ್ರೀ ಸಂಜಯ ವರ್ಮಾ ಇಡೀ ದೇಶದೆಲ್ಲೆಡೆ ಗೇಲ್ ವೇ ಬಿಜಿನೆಸ್ ನ ಪ್ರಸಾರ ಕಾರ್ಯದ ಹೊಣೆಯನ್ನು ತುಂಬಾ ಕೌಶಲ ಪೂರ್ಣವಾಗಿ ನಿಭಾಯಿಸುತ್ತಾ ಉಲ್ಲೇಖನೀಯ ಸಫಲತೆಯನ್ನು ಪಡೆದಿರುತ್ತಾರೆ. ಬಹುಮುಖ ಪ್ರತಿಭೆಯ ಒಡೆಯರಾದ ಶ್ರೀ ಸಂಜಯ ಜೀ ಇಂದು ಗ್ಲೇಜ್ ಟ್ರೇಡಿಂಗ್ ಇಂಡಿಯಾ ಪ್ರೈ.ಲಿ.ನ ಮಾರ್ಕೆಟಿಂಗ್ ವಿಭಾಗವನ್ನು ಯಶಸ್ವಿಯಾಗಿ ಮುನ್ನಡೆಸುತ್ತ ಗೇಲ್ ವೇ ಬಿಜಿನೆಸ್ ನ್ನು ನಿತ್ಯವೂ ಯಶಸ್ಸಿನ ಹೊಸ-ಹೊಸ ಶಿಖರಗಳತ್ತ ಕೊಂಡೊಯ್ಯುತ್ತಿದ್ದಾರೆ.