ಗೇಲ್ ವೇ ರೂಪಾಭಮ್

ನಿಮ್ಮ ವ್ಯಕ್ತಿತ್ವಕ್ಕೊಂದು ಕಾಂತಿ ತುಂಬಿದ ಆಕರ್ಷಣೆ ತಂದು ಕೊಡುವ ಉತ್ಪನ್ನಗಳು ರೂಪಾಭಮ್ ಎಂಬ ಶಬ್ದವು ಎರಡು ಪದಗಳಿಂದ ರಚಿತವಾಗಿದೆ; ‘ರೂಪ’ ಎಂದರೆ ಸೌಂದರ್ಯ, ಹಾಗೂ ‘ಆಭಂ’ ಎಂದರೆ ಕಾಂತಿ ಎಂದರ್ಥ. ಗೇಲ್ ವೇ ರೂಪಾಭಮ್ ನ ಪ್ರತಿ ಉತ್ಪನ್ನವನ್ನು ಮಹಿಳೆಯರು ಹಾಗೂ ಪುರುಷರಿಬ್ಬರ ವಿಭಿನ್ನ ಅಗತ್ಯಗಳನ್ನು ಹಾಗೆಯೇ ಪರಿಸರ ಮತ್ತು ಮಾಲಿನ್ಯ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ತಯಾರಿಸಲಾಗುತ್ತದೆ. ಸೌಂದರ್ಯದ ಬೇರೆ-ಬೇರೆ ಮಾನದಂಡಗಳ ಮೇಲೆ ಆಧಾರಿತ ಗೇಲ್ ವೇ ರೂಪಾಭಮ್ ನ ಎಲ್ಲಾ ಉತ್ಪನ್ನಗಳಲ್ಲಿ ತ್ವಚೆಯ ಪ್ರಾಕೃತಿಕ ಪೋಷಣೆ ತತ್ವಗಳನ್ನು ಶಾಮೀಲು ಮಾಡಲಾಗಿದೆ.

ಗೇಲ್ ವೇ ನ್ಯಾಚುರಲ್ ಟ್ವಿಸ್ಟ್

ಗೇಲ್ ವೇ ‘ನ್ಯಾಚುರಲ್ ಟ್ವಿಸ್ಟ್’ ರೇಂಜ್ ನ ಅಂತರ್ಗತದಲ್ಲಿ ಬರುವ ಎಲ್ಲಾ ಉತ್ಪನ್ನಗಳ ನಿರ್ಮಾಣವನ್ನು ಒಂದು ಆರೋಗ್ಯಕರ ಜೀವನ ಶೈಲಿಯನ್ನು ಗಮನದಲ್ಲಿಟ್ಟುಕೊಂಡು, ಜನರಿಗೆ ಒಂದು ಸ್ವಾಸ್ಥ್ಯಕರ ಜೀವನವನ್ನು ಒದಗಿಸುವ ನಿಟ್ಟಿನಲ್ಲಿ ಮಾಡಲಾಗುತ್ತದೆ. ಇವುಗಳ ಹೆಸರಿನಿಂದಲೇ ಇವು ಉತ್ತಮ ಶ್ರೇಣಿಯ ಉತ್ಪನ್ನಗಳನ್ನು ಪ್ರತಿನಿಧಿಸುತ್ತವೆ ಎಂಬುದು ಗೊತ್ತಾಗುತ್ತದೆ. ಗೇಲ್ ವೇ ನ್ಯಾಚುರಲ್ ಟ್ವಿಸ್ಟ್ ನ ರೇಂಜ್ ನಲ್ಲಿ ಶರೀರವನ್ನು ಸ್ವಸ್ಥ, ಎಲ್ಲ ಕಾರ್ಯಗಳಿಗೆ ಅರ್ಹ (ಫಿಟ್), ಹಾಗೂ ಶಕ್ತಿಯಿಂದ ತುಂಬಿದ ಹಾಗಿಡಲು ಪೇಯ ಉತ್ಪನ್ನ್ನಗಳನ್ನು ಶಾಮೀಲು ಮಾಡಲಾಗಿದೆ. ಈ ರೇಂಜ್ ನಲ್ಲಿ ನಿಮ್ಮ ಆರೋಗ್ಯಕರ ಜೀವನಕ್ಕಾಗಿ ತುಂಬಾ ಅಗತ್ಯವಿವೆಯೋ ಅಂತಹ ಪೋಷಕ ತತ್ವ ಹಾಗೂ ಗುಣಗಳುಳ್ಳ ಹರ್ಬಲ್ ಉತ್ಪನ್ನಗಳನ್ನು ಶಾಮೀಲು ಮಾಡಲಾಗಿದೆ. ಎಲೋವೆರಾ ಜ್ಯೂಸು, ಗ್ರೀನ್ ಕಾಫೀ, ಗ್ರೀನ್ ಟೀ ಗಳಂಥ ಪ್ರಾಕೃತಿಕ ಉತ್ಪನ್ನಗಳು ಈ ಶ್ರೇಣಿಯಲ್ಲಿ ಬರುತ್ತವೆ.

ಗೇಲ್ ವೇ ದಂತ ಓರಮ್

ದಂತಗಳ ಉತ್ತಮ ಪೋಷಣೆ ಹಾಗೂ ಅವುಗಳ ಸುರಕ್ಷೆಗಾಗಿ ಗೇಲ್ ವೇ ಒಂದು ಪ್ರಾಡಕ್ಟ್ ಗಳ ರೇಂಜ್ ನ್ನು ಹೊಂದಿರುತ್ತದೆ. ಈ ರೇಂಜ್ ನಲ್ಲಿ ಅನೇಕ ದುರ್ಲಭ ಗಿಡ-ಮೂಲಿಕೆ ಹಾಗೂ ವನಸ್ಪತಿಗಳ ಅರ್ಕನಿಂದ ತಯಾರಿಸಿದ ಉತ್ಪನ್ನಗಳು ಶಾಮೀಲಾಗಿರುತ್ತವೆ. ಈ ರೇಂಜ್ ನಲ್ಲಿ ಬರುವ ಎಲ್ಲಾ ಉತ್ಪನ್ನಗಳು ಪ್ರಾಕೃತಿಕವಾಗಿ ನಿಮ್ಮ ಹಲ್ಲುಗಳನ್ನಷ್ಟೇ ಅಲ್ಲದೇ ಅಲ್ಲಿನ ಒಸಡು, ದಂತಮೂಲ, ಅಲ್ಲಿನ ನಾರ-ನಾಡಿಗಳ ಜೊತೆಗೆ ಇಡೀ ಬಾಯಿಯ ಪೋಷಣೆಯನ್ನು ಮಾಡುತ್ತವೆ. ಈ ರೇಂಜ್ ನಲ್ಲಿ ಬರುವ ಎಲ್ಲಾ ಉತ್ಪನ್ನಗಳು 100% ನಷ್ಟು ಸಂಪೂರ್ಣವಾಗಿ ಸಸ್ಯಮೂಲದವು (ಶಾಕಾಹಾರಿ) ಆಗಿದ್ದು ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ತಯಾರಿಸಲ್ಪಟ್ಟಿರುತ್ತವೆ. ಈ ಉತ್ಪನ್ನಗಳನ್ನು ಪ್ರತಿದಿನ ಬಳಸುವುದರಿಂದ ನಿಮ್ಮ ದಂತಗಳು ಸ್ವಸ್ಥ ಹಾಗೂ ವಸಡುಗಳು ದೃಢವಾಗಿ ನಿರ್ಮಾಣಗೊಳ್ಳುತ್ತವೆ.

ಶ್ರೀ ಗುಣಮ್

ಗೇಲ್ ವೇ ನ ಈ ರೇಂಜು ಯಾರೆಲ್ಲ ಪುರುಷರು ಬೇರೆಯವರಿಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳಬೇಕು ಎಂಬ ಇಚ್ಛೆಯನ್ನು ಹೊಂದಿದ್ದಾರೋ ಅವರಿಗೆ ಸಮರ್ಪಿತವಾಗಿದೆ. ಪುರುಷರ ಹೆಗಲ ಮೇಲೆ ಸಾಕಷ್ಟು ಹೊಣೆಗಾರಿಕೆಗಳಿರುತ್ತವೆ ಎಂಬುದು ನಮಗೆ ಗೊತ್ತಿದೆ. ಆ ಕಾರಣದಿಂದಲೇ ಅವರು ತಮ್ಮ ಪೋಷಣೆಯ ಕಡೆಗೆ ಹೆಚ್ಚಿನ ಲಕ್ಷ್ಯ, ಕಾಳಜಿ ವಹಿಸಲು ಅಸಮರ್ಥರಾಗಿರುತ್ತಾರೆ. ‘ಶ್ರೀ ಗುಣಂ’ ರೇಂಜ್ ನಲ್ಲಿ ವಿಶೇಷವಾಗಿ ಗಂಡಸರ ವ್ಯಕ್ತಿತ್ವಕ್ಕೆ ಮತ್ತಷ್ಟು ಮೆರಗು ಕೊಡುವ ಉತ್ಪನ್ನಗಳನ್ನು ಶಾಮೀಲು ಮಾಡಲಾಗಿದೆ. ಶ್ರೀ ಗುಣಂ; ಇದು ಶ್ರೀ (ಪುರುಷ) ಮತ್ತು ಗುಣ (ಗುಣಮಟ್ಟ) ಗಳ ಒಂದು ಮಿಶ್ರಣವಾಗಿದೆ. ಈ ರೇಂಜ್ ನ ಎಲ್ಲಾ ಉತ್ಪನ್ನಗಳು ಪುರುಷರ ‘ರಫ್ ಎಂಡ್ ಟಫ್’ ಕಠಿಣ ಸ್ಕಿನ್ ಗೆ ಅನುಕೂಲವಾಗಿದೆ. ಜೊತೆಗೆಯೇ ಸ್ಟೈಲಿಂಗ್ ಪ್ರಾಡಕ್ಟ್ ಗಳು ನಿಮಗೆ ಆತ್ಮವಿಶ್ವಾಸದಿಂದ ತುಂಬಿದ ಲುಕ್ ಕೊಡುವ ಭರವಸೆಯನ್ನು ನೀಡುತ್ತವೆ.

ಗೇಲ್ ವೇ ನ್ಯೂಟ್ರೀಫ್ಲೋ

ನಿಮ್ಮ ಹಾಗೂ ನಿಮ್ಮ ಕುಟುಂಬದವರ ಸಂಪೂರ್ಣ ಆರೋಗ್ಯಕ್ಕೆ ಗೇಲ್ ವೇ ನ್ಯೂಟ್ರೀಫ್ಲೋ ಒಂದು ಸ್ವಸ್ಥ ಪರ್ಯಾಯವನ್ನು ನೀಡುತ್ತದೆ. ಇವು ಅದೆಂಥ ಉತ್ಪನ್ನಗಳೆಂದರೆ ಒಂದು ಆರೋಗ್ಯಕರ ಜೀವನ ಶೈಲಿಯನ್ನು ನಡೆಸಲು ನಮಗೆ ಪ್ರತಿದಿನವೂ ಇವುಗಳ ಅಗತ್ಯ ಉಂಟಾಗುತ್ತದೆ. ಈ ರೇಂಜ್ ನ ಎಲ್ಲಾ ಉತ್ಪನ್ನಗಳೂ ನಮ್ಮ ಶಕ್ತಿ, ವಿಕಾಸ, ಹಾಗೂ ಊರ್ಜೆಗಳನ್ನು ಹೆಚ್ಚಿಸುವುದರೊಂದಿಗೆ ನಮ್ಮ ಇಮ್ಯುನಿಟಿ ಸಿಸ್ಟಂನ್ನೂ ಕೂಡ ಸರಿಪಡಿಸುತ್ತವೆ. ಒಂದು ಆರೋಗ್ಯಕರ ಜೀವನ ಶೈಲಿಗಾಗಿ ಯಾವ ಡಯಟ್ ನ ಅಗತ್ಯ ನಮಗಿದೆಯೋ ಅದನ್ನೇ ಗಮನದಲ್ಲಿಟ್ಟುಕೊಂಡು ನ್ಯೂಟ್ರೀಫ್ಲೋ ರೇಂಜ್ ನ್ನು ಸಿದ್ಧ ಪಡಿಸಲಾಗಿದೆ. ಆರೋಗ್ಯಕ್ಕೆ ಲಾಭವನ್ನುಂಟು ಮಾಡುವ ಏನೆಲ್ಲಾ ತತ್ವಗಳು ಇದರಲ್ಲಿರುವುದು ವೈಜ್ಞಾನಿಕವಾಗಿ ಪ್ರಮಾಣಿಸಲ್ಪಟ್ಟಿದೆ. ಗೇಲ್ ವೇ ನ್ಯೂಟ್ರೀಫ್ಲೋ ರೇಂಜ್ ಸುಪ್ಲಿಮೆಂಟ್, ಡಯಟ್ ನ ಮೇಲೆ ಒತ್ತು ಕೊಡುವ ಕಾರಣ, ಇದನ್ನೊಂದು ಹೆಲ್ದಿ ಹಾಗೂ ಪೌಷ್ಟಿಕಾಂಶಗಳಿಂದ ಭರಪೂರ ಇರುವ ಉತ್ಪನ್ನವೆಂದು ಗುರುತಿಸಬಹುದು.

ಗೇಲ್ ವೇ ಗೃಹ ಶೌರ್ಯಂ

ನಾವು ಯಾವಾಗ ‘ಗೃಹ’ವನ್ನು ‘ಶೌರ್ಯ’ ದೊಂದಿಗೆ ಜೋಡಿಸಿದೆವೋ ಆಗ ‘ಗೃಹ ಶೌರ್ಯಂ’ನ ಉತ್ಕೃಷ್ಟ ಉತ್ಪನ್ನಗಳ ರೇಂಜ್ ಜನ್ಮವಾಯಿತು. ಈ ಉತ್ಪನ್ನಗಳು ತಮ್ಮ ವೈಶಿಷ್ಟ್ಯ ಹಾಗೂ ಗುಣಮಟ್ಟಗಳೊಂದಿಗೆ ‘ಸ್ವಚ್ಛತೆಯು ಭಕ್ತಿಗಿಂತಲೂ ಮಿಗಿಲಾಗಿ ಇರುತ್ತದೆ’ ಎಂಬ ನಮ್ಮೆಲ್ಲರ ವಿಶ್ವಾಸವನ್ನು ಕಾಯಂ ಮಾಡಿರುತ್ತವೆ. ನಿಮ್ಮ ಜೀವನವು ಇನ್ನಷ್ಟು ಉತ್ತಮಗೊಳ್ಳಲು ಹಾಗೂ ಅದಕ್ಕೆ ಇನ್ನಷ್ಟು ಹೆಚ್ಚಿನ ಸೌಂದರ್ಯವನ್ನು ತರಲು ಗೇಲ್ ವೇ ಗೃಹ ಶೌರ್ಯಂನ ಅಂತರ್ಗತದಲ್ಲಿ ಅನೇಕ ಉತ್ಪನ್ನಗಳ ರೇಂಜ್ ಇರುತ್ತವೆ. ಇವುಗಳಲ್ಲಿ; ಡಿಶ್ ವಾಶಿಂಗ್, ಹೋಮ್ ಕ್ಲೀನಿಂಗ್ ನಿಂದ ಹಿಡಿದು ಫ್ಯಾಬ್ರಿಕ್ ಕೇಯರ್ ನ ವರೆಗಿನ ಉತ್ಪನ್ನಗಳು ಇರುತ್ತವೆ.

ಗೇಲ್ ವೇ ಕಲಕಿಮ್

ಗೇಲ್ ವೇ ಕಲಕಿಮ್ ರೇಂಜ್ ಗಳು ಮಹಿಳೆಯರಿಗೆ ಸಮರ್ಪಿತವಾಗಿವೆ. ಈ ರೇಂಜ್ ಗಳಲ್ಲಿ ಸ್ತ್ರೀಯರ ಸೌಂದರ್ಯಯವನ್ನು ಹೆಚ್ಚಿಸುವ ಉತ್ಪನ್ನಗಳು ಶಾಮೀಲಾಗಿರುತ್ತವೆ. ನೀವು ಯಾವಾಗ ಸುಂದರವಾಗಿ ಕಾಣುತ್ತೀರೋ ಆಗಲೇ ನಿಮಗೆ ಉತ್ತಮಿಕೆಯ (feeling good) ಅನುಭವ ಆಗುತ್ತದೆ. ಮತ್ತೆ ಯಾವಾಗ ನೀವು ಉತ್ತಮಿಕೆಯನ್ನು ಅನುಭವಿಸುತ್ತೀರೋ ಆಗಲೇ ನಿಮ್ಮ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಅಣಿಯಾಗುವಿರಿ.

ಗೇಲ್ ವೇ ಕೃಷಂ

ಭಾರತವು ಒಂದು ಕೃಷಿ ಪ್ರಧಾನ ದೇಶವಾಗಿದೆ. ಇಂದಿಗೂ ನಮ್ಮ ದೇಶದ ಒಂದು ದೊಡ್ಡ ಜನಸಂಖ್ಯೆ ಭಾಗ ಕೃಷಿ-ಚಟುವಟಿಕೆಗಳ ಮೇಲೆ ನಿರ್ಭರವಾಗಿದೆ. ಇಂಥ ಪರಿಸ್ಥಿತಿಯಲ್ಲಿ ನಾವು ಬೇಸಾಯವನ್ನು ವೈಜ್ಞಾನಿಕ ರೀತಿಗಳ ಜೊತೆ-ಜೊತೆಗೆ ಇನ್ನಷ್ಟು ಉತ್ತಮ ಉತ್ಪನ್ನಗಳನ್ನು ಬಳಸಿಕೊಳ್ಳಬೇಕು, ಆಗಲೇ ಕೇವಲ ನಾವು ಬೆಳೆಯುವ ಬೆಳೆಯ ಅಭಿವೃದ್ಧಿಯಷ್ಟೇ ಆಗದೇ ನಮ್ಮ ಕೃಷಿ ಭೂಮಿಯ ಫಲವತ್ತತೆಯೂ ಉತ್ತಮವಾಗಿ ಇರುವುದು. ಆದ್ದರಿಂದ ರೈತರಿಗೆ ಒಂದು ಆರೋಗ್ಯಕರ ಹಾಗೂ ಹಾನಿಕಾರಕ ರಸಾಯನಗಳಿಂದ ಮುಕ್ತ ಫಸಲನ್ನು ಒದಗಿಸಿ ಕೊಡಲು ಗೇಲ್ ವೇ ಕೃಷಂ ರೇಂಜ್ ನಲ್ಲಿ, ಯಾವೆಲ್ಲ ಉತ್ಪನ್ನಗಳು ಮಣ್ಣಿನ ಫಲವತ್ತತೆ, ಗುಣಮಟ್ಟಗಳನ್ನು ಹೆಚ್ಚಿಸಿ ಬೆಳೆಯ ಇಳುವರಿಯಲ್ಲಿ ಹೆಚ್ಚುವರಿ ಉಂಟು ಮಾಡುತ್ತವೋ ಆ ಎಲ್ಲ ಕೃಷಿಗೆ ಸಂಬಂಧಿಸಿದ ಉತ್ಪನ್ನಗಳನ್ನು ಶಾಮೀಲು ಮಾಡಲಾಗಿದೆ. ಈ ರೇಂಜ್ ನ ಎಲ್ಲಾ ಉತ್ಪನ್ನಗಳು ಮಣ್ಣಿನಲ್ಲಿ ಸಾವಯವ ಪದಾರ್ಥ ಮತ್ತು ಭೂಮಿಯಲ್ಲಿ ಎರೆ ಹುಳುಗಳನ್ನು ಮರಳಿ ತರುವಲ್ಲಿ ಸಹಾಯ ಮಾಡುತ್ತವೆ.

ಕಲರ್ ಲೈನ್

ಆಕರ್ಷಕ, ಕಣ್ಸೆಳೆಯುವ ವರ್ಣಗಳ ಪ್ರಪಂಚದ ಹೆಸರು ‘ಗೇಲ್ ವೇ ಕಲರ್ ಲೈನ್’ ಎಂದಾಗಿದೆ. ಇಲ್ಲಿ ಮಹಿಳೆಯರಿಗೆಂದೇ ವಿಶೇಷವಾಗಿ ತಯಾರಿಸಿದ ಒಂದು ವಿಶಾಲ ರೇಂಜ್ ನ ಪ್ರಾಡಕ್ಟ್ ಗಳಿದ್ದು ಅವು ಪ್ರತಿಯೊಂದು ವಯಸ್ಸಿನ ಸ್ತ್ರೀಯರಿಗೆ, ಪ್ರತಿ ಪ್ರಸಂಗ, ದಿರಿಸು, ಹಾಗೂ ಮೂಡ್ ಗಳಿಗೆ ಹೊಂದಿಕೆಯಾಗುತ್ತದೆ. ಈ ರೇಂಜ್ ನ ಉತ್ಪನ್ನಗಳ ಸಹಾಯದಿಂದ ನೀವು ನಿಮ್ಮ ಭಾವನೆಯ ಹೃದಯದಲ್ಲಿ ಯಾವ ಪ್ರಕಾರದ ಚಿತ್ರಣವನ್ನು ಮಾಡಿಕೊಂಡಿದ್ದೀರೋ ಬಿಲ್ಕುಲ್ ಅದರಂತೆಯೇ ನಿಮ್ಮನ್ನು ನೀವು ಪ್ರಸ್ತುತ ಪಡಿಸಿಕೊಳ್ಳಬಹುದು. ಗೇಲ್ ವೇ ನ ಈ ಉತ್ಪನ್ನಗಳು ವರ್ಲ್ಡ್ ಕ್ಲಾಸ್ ಗುಣಮಟ್ಟದೊಂದಿಗೆ ಉಚಿತವಾದ ಬೆಲೆಗಳಿಗೆ ನಿಮಗೆ ಉಪಲಬ್ಧವಾಗುವ ಮೂಲಕ ಎಲ್ಲರ ಫೇವರಿಟ್ ಆಗಿರುತ್ತವೆ. ಇನ್ನು ಯಾವಾಗೆಲ್ಲ ನಿಮಗೆ ಬೇರೆಯವರಿಗಿಂತ ವಿಶೇಷವಾಗಿ ಕಾಣಿಸಿಕೊಳ್ಳಲು ಇಷ್ಟವಾಗುವುದೋ ಅಥವಾ ಪ್ರತಿದಿನ ಬೇರೆಯೇ ತೆರನಾದ ರೀತಿಯಿಂದ, ನಿಮ್ಮದೇ ಆದ ಬೋಲ್ಡ್ ಸ್ಟೈಲ್ ನಲ್ಲಿ ಹೊರ ಬರುವ ಆಸೆ ಆಗುತ್ತದೋ ಆಗೆಲ್ಲ ಗೇಲ್ ವೇ ಕಲರ್ ಲೈನ್ ನ ಕಲರ್ ಫುಲ್ ಪ್ರಪಂಚಕ್ಕೆ ಬನ್ನಿರಿ, ನಿಮ್ಮ ಸೌಂದರ್ಯವನ್ನು ನಿಮ್ಮದೇ ಅಂದಾಜಿನಲ್ಲಿ ವ್ಯಕ್ತ ಪಡಿಸಿರಿ.