ಗೇಲ್ ವೇ ಫೌಂಡೇಶನ್, ಡೈರೆಕ್ಟ್ ಸೇಲಿಂಗ್ ವಿಭಾಗದ ಅಗ್ರ ಕಂಪನಿಗಳಲ್ಲಿ ಒಂದು ಕಂಪನಿಯಾಗಿದ್ದು ಗ್ಲೇಜ್ ಟ್ರೇಡಿಂಗ್ ಇಂಡಿಯಾ ಪ್ರೈ.ಲಿ.ನ ಕಾರ್ಪೊರೇಟ್ ಸೋಶಿಯಲ್ ರಿಸ್ಪೋನ್ಸಿಬಿಲಿಟಿ (CSR) ನ ಒಂದು ವಿಂಗ್ ಆಗಿರುತ್ತದೆ. ಗೇಲ್ ವೇ ಫೌಂಡೇಶನ್ ನ್ನು ಕಂಪನಿಯ ಡೈರೆಕ್ಟರ್ಸ್ ಶ್ರೀ ಸಂಜೀವ ಛೀಬ್ಬರ್ ಹಾಗು ಶ್ರೀ ಚೇತನ ಹಾಂಡಾ ಇವರುಗಳು, 2015 ರ ಅಗಸ್ಟನಲ್ಲಿ; ‘ಈ ಸಂಸ್ಥೆಯ ಮುಖಾಂತರ ಒಂದು ಏಕೀಕೃತ ಹಾಗೂ ಪ್ರಾಮಾಣಿಕ ಸಮಾಜದ ನಿರ್ಮಾಣದಲ್ಲಿ ತಮ್ಮದೂ ಒಂದು ಕೊಡುಗೆಯಾಗಿ ಅಲ್ಲಿರುವ ಎಲ್ಲರಿಗೂ ಸಮಾನ ಅವಕಾಶಗಳು ದೊರೆತು ಎಲ್ಲರಿಗೂ ತಮ್ಮ ಪೂರ್ಣ ಸಾಮರ್ಥ್ಯದ ಅನುಭವವೂ ಆಗಬೇಕು’ ಎಂಬ ಉನ್ನತ ವಿಷನ್ ನ್ನು ಇಟ್ಟುಕೊಂಡು ಪ್ರಾರಂಭಿಸಿದ್ದರು. ಹಾಗೆಯೇ ಇದರ ಮೂಲಕ ದೇಶದೆಲ್ಲೆಡೆ ವಂಚಿತ ಮತ್ತು ಕಡಿಮೆ ವಿಷೇಶಾಧಿಕಾರವನ್ನು ಹೊಂದಿರುವ ವರ್ಗದ ಜನರ ಪ್ರಗತಿ ಹಾಗೂ ವಿಕಾಸಗಳಿಗೂ ಸಾಕಷ್ಟು ಪ್ರೋತ್ಸಾಹ ದೊರಕಬೇಕು ಎಂಬುದೂ ಸುನಿಶ್ಚಿತಗೊಳ್ಳುವ ಹಾಗಿರಬೇಕು.

ಗೇಲ್ ವೇ ಫೌಂಡೇಶನ್ನಿನ ಬಳಿ ಎಸ್.ಈ.ಪಿ. ಹಾಗು ಡಿಜಿಟ್ಲ್ಯಾ ಎಂಬ ಹೆಸರಿನ ಎರಡು ಪ್ರಮುಖ ಕಾರ್ಯಕ್ರಮಗಳಿವೆ. ಇದರ ಎಸ್.ಈ.ಪಿ. ಕಾರ್ಯಕ್ರಮದಲ್ಲಿ ಒಂದೆಡೆ ಜನರನ್ನು ಆಧ್ಯಾತ್ಮಿಕವಾಗಿ ವಿಕಸಿತಗೊಳಿಸುವುದರೊಂದಿಗೆ ಇನ್ನೊಂದೆಡೆ ಅವರ ಅವಚೇತನ ಮನಸ್ಸಿಗೆ ಶಕ್ತಿಯನ್ನು ಸ್ವೀಕರಿಸುವಲ್ಲಿ ಸಹಾಯ ಮಾಡಿ ಅವರ ನಿಜ-ಆಂತರಿಕ ಸಾಮರ್ಥ್ಯದ ಪರಿಚಯವನ್ನು ಮಾಡಿಸಲಾಗುತ್ತದೆ. ಹಾಗೆಯೇ ಡಿಜಿಟ್ಲ್ಯಾ ನ ಉದ್ದೇಶವು; ಆ ಜನರಿಗೆ ನಿಶ್ಶುಲ್ಕ ತಾಂತ್ರಿಕ ಪ್ರಶಿಕ್ಷಣವನ್ನು ಕೊಡುವುದು ಆಗಿದೆ. ಈ ಮೂಲಕ ಯಾರಿಗೆ ಕಂಪ್ಯೂಟರ್ ಹೇಗೆ ಬಳಸುವುದು ಎಂಬುದರ ಕುರಿತು ಕೊಂಚವೂ ಮಾಹಿತಿಯಿಲ್ಲವೋ ಅವರೆಲ್ಲ ಐ.ಟಿ. ಸ್ಕಿಲ್ ನಲ್ಲಿ ಕುಶಲರಾಗಿ ಮುಂದೆ ಸಾಗಿ ಅವರು ದೇಶದ ಮಹತ್ವಾಕಾಂಕ್ಷೆಯ ಯೋಜನೆ; ‘ಡಿಜಿಟಲ್ ಇಂಡಿಯಾ ಮಿಶನ್’ ಗೆ ತಮ್ಮ ಸಕಾರಾತ್ಮಕ ಯೋಗದಾನ ಕೊಡುವಂತೆ ಆಗುವರು.

ಈ ಪ್ರಕಾರವಾಗಿ, ಗೇಲ್ ವೇ ಫೌಂಡೇಶನ್ ತನ್ನ ಕಾರ್ಪೊರೇಟ್ ಸೋಶಿಯಲ್ ಹೊಣೆಗಾರಿಕೆಯ ಮೇರೆಗೆ ಉನ್ನತ ಆದರ್ಶಗಳೊಂದಿಗೆ ಜನರಿಗೆ ಆಧ್ಯಾತ್ಮಿಕ ಹಾಗೂ ತಾಂತ್ರಿಕ ಜ್ಞಾನವನ್ನೂ ಪ್ರದಾನ ಮಾಡುತ್ತಿದೆ.