ಗ್ಲೇಜ್ ಕುರಿತಾಗಿ

ದೇಶದ ಸರ್ವಶ್ರೇಷ್ಠ ಸೇಲಿಂಗ್ ಕಂಪನಿಗಲ್ಲಿ ಒಂದಾದ ‘ಗ್ಲೇಜ್ ಟ್ರೇಡಿಂಗ್ ಇಂಡಿಯಾ ಪ್ರೈ.ಲಿ.’ ಸಂಸ್ಥೆಯನ್ನು 2003 ನೇ ಇಸವಿಯಲ್ಲಿ ಇಬ್ಬರು ದೂರದರ್ಶಿ ಉದ್ಯಮಿಗಳಾದ ಶ್ರೀ ಸಂಜೀವ ಚಿಬ್ಬರ್ ಹಾಗೂ ಶ್ರೀ ಚೇತನ ಹಾಂಡಾ ಇವರು ಸ್ಥಾಪಿಸಿದರು. ಈ ಸಂಸ್ಥೆಯ ಪ್ರಮುಖ ಉದ್ದೇಶ, ‘ಎಲ್ಲರ ಜೊತೆಗೂಡಿ ಎಲ್ಲರ ವಿಕಾಸ’ (ಸಬಕಾ ಸಾಥ ಸಬಕಾ ವಿಕಾಸ) ಎಂಬ ತತ್ವವನ್ನು ಒಲ್ಲಗೊಂಡು ‘ಒಗ್ಗಟ್ಟಿನಲ್ಲಿಯೇ ಯಶಸ್ಸು’ ಎಂಬುದನ್ನು ಪ್ರೋತ್ಸಾಹಿಸುವುದು ಆಗಿದೆ. ಹಾಗೆಯೇ ಈ ಸಂಸ್ಥೆಯೊಂದಿಗೆ ಕೈ ಜೋಡಿಸಿದ ಜನರ ಬಾಳನ್ನು ಸಮೃದ್ಧಗೊಳಿಸುವುದೂ, ಹಾಗೂ ಗ್ರಾಹಕರಿಗೆ ಉತ್ತಮ ಖರೀದಿಯ ಅನುಭವವನ್ನು ಒದಗಿಸುವುದೂ ಗ್ಲೇಜ್ ಸ್ಥಾಪನೆಯ ಮುಖ್ಯ ಉದ್ದೇಶವಾಗಿದೆ.

ಸಂಕ್ಷೇಪದಲ್ಲಿ ‘ಗ್ಲೇಜ್ ಟ್ರೇಡಿಂಗ್ ಇಂಡಿಯಾ ಪ್ರೈ.ಲಿ.’ ಸಂಸ್ಥೆಯ ಮೂಲ ಸಿದ್ಧಾಂತವನ್ನು ತಿಳಿಸಬೇಕೆಂದರೆ; ವಿಶೇಷವಾಗಿ ಸಿದ್ಧ ಪಡಿಸಿದ, ಉತ್ಕೃಷ್ಟ ಗುಣಮಟ್ಟದ ಎಫ್.ಎಮ್.ಸಿ.ಜಿ. ಉತ್ಪನ್ನಗಳನ್ನು ಸಾಕಷ್ಟು ಅಗ್ಗದ ದರಗಳಲ್ಲಿ ಗ್ರಾಹಕರ ವರೆಗೂ ತಲುಪಿಸುವುದು, ಈ ಉದ್ಯೋಗದಿಂದಾಗುವ ಲಾಭವನ್ನು ಎಲ್ಲರೊಂದಿಗೂ ಹಂಚಿಕೊಳ್ಳುವುದು, ಹಾಗೂ ಮಾರಾಟದ ಸಮಯದಲ್ಲಿ ನಮ್ಮ ಚಾನೆಲ್ ಪಾರ್ಟ್ನರ್ಗಳೊಂದಿಗೆ ವಿತರಣೆ ಮಾಡಿಕೊಳ್ಳುವುದು ಆಗಿದೆ. ಅಂದರೆ; ಈ ಒಂದು ಉದ್ಯೋಗ ನಿರ್ಮಾಣದ ಮುಖಾಂತರ ಗಳಿಸಿದ ಧನವನ್ನು ಇದರಲ್ಲಿ ಭಾಗ ವಹಿಸಿದ ಎಲ್ಲಾ ಸದಸ್ಯರೊಂದಿಗೆ ಸಮೃದ್ಧಿಯ ಉದ್ದೇಶದಿಂದ ಹಂಚಿಕೊಳ್ಳುವುದು ಎಂದರ್ಥ.

ಕಂಪನಿಯ ಸಂಸ್ಥಾಪಕರ ಸ್ಪಷ್ಟ ದೃಷ್ಟಿ, ಉತ್ಸಾಹ, ಸಕಾರಾತ್ಮಕ ದೃಷ್ಟಿಕೋನ, ಮಹತ್ವಾಕಾಂಕ್ಷೆಯ ಸ್ವಭಾವ, ವ್ಯಾವಹಾರಿಕತೆ, ಹಾಗೂ ಇವರ ನೇತೃತ್ವದಲ್ಲಿ ಕೆಲಸ ಮಾಡುವ ನಿರ್ವಹಣಾ ಕಾರ್ಮಿಕರ ಕೋರ್ ಟೀಮು ಕಂಪನಿಯನ್ನು ತುಂಬಾ ವೇಗವಾಗಿ ಈ ಒಂದು ಯಶಸ್ಸಿನ ಹಂತಕ್ಕೆ ತಲುಪಿಸುವಲ್ಲಿ ಸಹಾಯ ಮಾಡಿತು. ಇಂದು ದೇಶದೆಲ್ಲೆಡೆ ಸುಮಾರು 40 ಲಕ್ಷಕ್ಕೂ ಹೆಚ್ಚಿನ ಸ್ವತಂತ್ರ ವಿತರಕರೂ ಹಾಗೂ 256 ಕ್ಕೂ ಹೆಚ್ಚು ಫ್ರೆಂಚೈಸ್ ಗಳಿದ್ದು ಇವರೆಲ್ಲ ಗೇಲ್ ವೇ ಬಿಜಿನೆಸ್ ಮಾಡೆಲ್ ನ ಮೇರೆಗೆ ಅದು ಕಂಡ ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದ್ದಾರೆ. ಗ್ಲೇಜ್ ನ ಈ ಕುಶಲ ಹಾಗೂ ವ್ಯಾಪಕ ಸ್ವತಂತ್ರ ಡಿಸ್ಟ್ರಿಬ್ಯೂಟರ್ ನೆಟ್ ವರ್ಕ್ ದೇಶದ ಪ್ರತಿಯೋರ್ವ ಗ್ರಾಹಕನ ವರೆಗೂ; ಆ ಗ್ರಾಹಕರು ದೇಶದ ಯಾವುದೇ ಅತಿ ದುರ್ಗಮ ಪ್ರದೇಶಗಳಲ್ಲಿ ವಾಸಿಸುತ್ತಿದ್ದರೂ ಸರಿಯೇ, ಗೇಲ್ ವೇ ಉತ್ಪನ್ನಗಳನ್ನು ತಲುಪಿಸುವ ಸುನಿಶ್ಚಿತತೆಯನ್ನು ಮಾಡುತ್ತದೆ.

ಉತ್ತಮ ಯಶಸ್ಸಿನ ಮಾರ್ಗದಿಂದ ಬಿಜಿನೆಸ್ ಮಾಡುತ್ತ ಗ್ಲೇಜ್ ಹಿಂದಿನ 16 ವರ್ಷಗಳಲ್ಲಿ ಈ ಒಂದು ಕ್ಷೇತ್ರದಲ್ಲಿ ಅದೆಂಥ ವೈಶಿಷ್ಟ್ಯವನ್ನು ಪಡೆದಿರುತ್ತದೆಂದರೆ; ಇದೊಂದು ಡೈರೆಕ್ಟ್ ಸೇಲಿಂಗ್ ನ ಸರ್ವಶ್ರೇಷ್ಠ ಕಂಪನಿಯಾಗಿ ಗುರುತಿಸಿಕೊಂಡಿದೆ. ಸರಳ ಜೀವನದ ಮೌಲ್ಯಗಳು, ಜೀವನದ ಬೇರೆ-ಬೇರೆ ಆಸೆ-ಆಕಾಂಕ್ಷೆಗಳು, ನಿರೀಕ್ಷೆಗಳು, ಕನಸುಗಳು, ಪುರಸ್ಕಾರ, ಸ್ವಾಮಿತ್ವ, ಒಂದುಗೂಡಿ ಗೆಲ್ಲುವ ಮನೋಭಾವನೆ ಈ ಮುಂತಾದ ಮೌಲ್ಯಗಳ ಮೇಲೆ ಆಧಾರಿತ ಗ್ಲೇಜ್ ಸಂಸ್ಥೆಯ ಧೋರಣೆ ಹೇಗಿದೆಯೆಂದರೆ; ಇವನ್ನು ಅಳವಡಿಸಿಕೊಳ್ಳುವ ಒಬ್ಬ ಸಾಧಾರಣ ವ್ಯಕ್ತಿಯೂ ಅತಿ ಕಠಿಣ ಎನಿಸುವ ಲಕ್ಷ್ಯಗಳನ್ನು ಸುಲಭವಾಗಿ ಹೊಂದುತ್ತಾನೆ.

ಡೈರೆಕ್ಟ್ ಸೇಲಿಂಗ್ ಬಿಜಿನೆಸ್ ನಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಗ್ರಾಹಕರ ಮನೆ ಬಾಗಿಲಿನ ವರೆಗೂ ಹೋಗಿ ನೆರವಾಗಿ ಅವರೆದುರಿಗೇ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದ ನಂತರವೇ ಮಾರಾಟ ಮಾಡಲಾಗುತ್ತದೆ. ಈ ಉದ್ಯಮದಲ್ಲಿ ಪಾರಂಪರಿಕ ಮಾರಾಟದ ಆಸರೆ ತೆಗೆದುಕೊಳ್ಳದೇ ಲಾಯಲ್ಟಿ ಹಾಗೂ ರಿವಾರ್ಡ್ ಕಾರ್ಯಕ್ರಮಗಳ ಮೂಲಕ ತಮ್ಮ ಗ್ರಾಹಕರೊಂದಿಗೆ ಒಂದು ದೀರ್ಘ ಕಾಲೀನ ಒಪ್ಪಂದ, ಸಂಬಂಧವನ್ನು ಏರ್ಪಡಿಸಲಾಗುತ್ತದೆ.